ಮುರುಳ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ತರಗತಿ ಕೊಠಡಿ ನಿರ್ಮಾಣಕ್ಕೆ ಗುದ್ದಲಿಪೂಜೆ

0

ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುರುಳ್ಯ ಇಲ್ಲಿ ಹೊಸ ತರಗತಿ ಕೊಠಡಿ ನಿರ್ಮಾಣಕ್ಕಾಗಿ ರೂ.14 ಲಕ್ಷ ಅನುದಾನ ಮಂಜೂರಾಗಿದ್ದು ,ಇತ್ತೀಚೆಗೆ ಸುಳ್ಯ ತಾಲೂಕು ಶಾಸಕಿ ಕು. ಭಾಗೀರಥಿ ಮುರುಳ್ಯ ಗುದ್ದಲಿ ಪೂಜೆ ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ಮುರುಳ್ಯಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವನಿತಾ ಸುವರ್ಣ, ಉಪಾಧ್ಯಕ್ಷರಾದ ಕು. ಜಾನಕಿ ,ಸದಸ್ಯರಾದ ಕರುಣಾಕರ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಅವಿನಾಶ್ ಡಿ., ಉಪಾಧ್ಯಕ್ಷರಾದ ಸವಿತಾ ಸದಸ್ಯರಾದ ರಂಜಿನಿ ,ಪ್ರಿಯಾ ಹಾಗೂ ಶಾಲಾ ದತ್ತು ದಾನಿಗಳಾದ ಯತೀಶ್ ಪಾಲೋಳಿ ,ಕಾಮಗಾರಿ ಕಾಂಟ್ರಾಕ್ಟರ್ , ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.