
ದ. ಕ ಸಂಪಾಜೆ ಗ್ರಾಮದ ಗೂನಡ್ಕದ ರಾಜಾರಾಂಪುರ – ದೊಡ್ಡಡ್ಕ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ 4 ನೇ ವರ್ಷದ ಶ್ರೀ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠಾ ದಿನ, ನೇಮೋತ್ಸವ ಮತ್ತು ಹರಕೆ ಕೋಲ ಮೇ 21 ರಂದು ವಿಜೃಂಭಣೆಯಿಂದ ಜರುಗಿತು.
















ಬೆಳಿಗ್ಗೆ ಗಣ ಹೋಮ, ಸ್ಥಳ ಶುದ್ದೀಕರಣ, ವಿಶೇಷ ಪೂಜೆ, ಪ್ರತಿಷ್ಠಾ ಕಾರ್ಯಕ್ರಮ ಬಳಿಕ ದೈವಸ್ಥಾನದ ಕಾಲಾವಧಿ ಕೊರಗಜ್ಜ ಹಾಗೂ ಹದಿನೈದು ಹರಕೆ ಕೋಲ ಸೇರಿ ಒಟ್ಟು ಹದಿನಾರು ದೈವದ ನರ್ತನ ಸೇವೆ ನಡೆಯಿತು. ಊರ -ಪರವೂರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಅಜ್ಜನ ಕರಿಗಂಧ ಪ್ರಸಾದವನ್ನು ಪಡೆದು ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಮೊಕ್ತೇಸರ ಬಿ.ಕೆ ಚಂದ್ರ ಶೇಖರ, ಗೌರವಾಧ್ಯಕ್ಷ ಡಿ.ಕೆ ಬಾಬು, ಸುಂದರ ಪೂಜಾರಿ ದೊಡ್ಡಡ್ಕ, ರವೀಂದ್ರ ,ಮತ್ತು ಅಧ್ಯಕ್ಷರು ಪದಾಧಿಕಾರಿಗಳು ಸರ್ವ -ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.










