ಆತಂಕದಲ್ಲಿ ನದಿ ತಟ ಭಾಗದ ಜನರು, ಸರಿಯಾದ ಮಾಹಿತಿ ನೀಡುವಂತೆ ಮನವಿ
ನಾಗಪಟ್ಟಣ ಬಳಿಯ ವೆಂಟೆಡ್ ಡ್ಯಾಮ್ ನ ಗೇಟ್ ಗಳನ್ನು ಇಂದು /ನಾಳೆ ತೆರೆಯಲಾಗುತ್ತಿದ್ದು ನೀರಿನ ಹರಿವು ಹೆಚ್ಚಾಗಲಿರುವ ಕಾರಣದಿಂದ ಕೆಳಭಾಗದ ಕೃಷಿಕರು ಹಾಗೂ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಬಟ್ಟೆ ಒಗೆಯಲು, ಸ್ನಾನಕ್ಕೆ, ಇತರೆ ಕೆಲಸಕ್ಕೆ ನೀರಿಗಿಳಿಯದಂತೆ ಎಚ್ಚರ ವಹಿಸುವಂತೆ ಮೇ 20 ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಪತ್ರಿಕಾ ಪ್ರಕಟಣೆ ನೀಡಿದ್ದರು.















ಆದರೆ ಪ್ರಕಟಣೆ ನೀಡಿ 24 ಗಂಟೆ ಕೆಳೆದರೂ ಇನ್ನೂ ಕೂಡ ಗೇಟ್ ತೆಗೆಯದೇ ಇದ್ದು ನದಿ ತಟ ಭಾಗದ ಜನರು ಗೊಂದಲದಲ್ಲಿ ಇದ್ದಾರೆ.ಆದರಿಂದ ಕೂಡಲೇ ಸಂಭಂದಪಟ್ಟವರು ಸರಿಯಾದ ಮಾಹಿತಿ ನೀಡುವಂತೆ ಅವರು ಅಗ್ರಹಿಸಿದ್ದಾರೆ.










