














ಕಳೆದ ಮಳೆಗಾಲದಲ್ಲಿ ಎಡಮಂಗಲ ಗ್ರಾಮದ ಮಾಲೆಂಗ್ರಿ ಎಂಬಲ್ಲಿ ಸೇತುವೆಯ ಅಡಿಭಾಗದ ಕಲ್ಲುಗಳು ಮಳೆ ನೀರಿನ ರಭಸಕ್ಕೆ ಕೊಚ್ವಿಹೋಗಿ ಸೇತುವೆಯ ಮೇಲಿನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಶಾಸಕಿ ಭಾಗೀರಥಿ ಮುರುಳ್ಯರವರ ಅನುದಾನದಲ್ಲಿ ನೂತನ ಸೇತುವೆ ನಿರ್ಮಾಣವಾಯಿತು. ಸೇತುವೆಯ ಇಕ್ಕೆಲಗಳಲ್ಲಿ ಮಣ್ಣು ಹಾಕಿದ್ದು, ಇದೀಗ ಅಕಾಲಿಕ ಮಳೆಗೆ ಮಣ್ಣು ಕರಗಿ ಕೆಸರುಗದ್ದೆ ನಿರ್ಮಾಣವಾಗಿದ್ದು, ವಾಹನ ಚಾಲಕರು, ನಡೆದುಕೊಂಡು ಹೋಗುವವರು ಹರಸಾಹಸಪಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರು ಈ ಕಡೆಗೆ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.










