














ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಸಂಘದ ಹಿರಿಯ ನಿರ್ದೇಶಕ ಅಶೋಕ್ ನೆಕ್ರಾಜೆಯವರಿಗೆ ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಮೇ. 21ರಂದು ನಡೆಯಿತು.
ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರತನ್ ಕಲ್ಕುದಿ ಅಶೋಕ್ ನೆಕ್ರಾಜೆಯವರನ್ನು ಗೌರವಿಸಿದರು. ಸಂಘದ ಉಪಾಧ್ಯಕ್ಷ ಗಿರೀಶ್ ಪದ್ನಡ್ಕ, ನಿರ್ದೇಶಕರಾದ ಭರತ್ ನೆಕ್ರಾಜೆ, ಶಿವಪ್ರಸಾದ್ ಮಾದನಮನೆ, ದುರ್ಗಾಪ್ರಸಾದ್, ವಿಶಾಲಾಕ್ಷಿ ಕುಕ್ಕಪ್ಪನಮನೆ, ಶಶಿಕಲಾ ಅಮೈ, ರಮೇಶ್ ನಾಯ್ಕ್ ಬೂದಿಪಳ್ಳ, ತಿಮ್ಮಪ್ಪ ಪೂಜಾರಿ ಉಡ್ದೋಳಿ, ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್ ಕೇದಿಗೆಬನ, ಸಿಬ್ಬಂದಿಗಳಾದ ಶ್ರೀಮತಿ ಅನಿತಾ ಕುಮಾರಿ, ರೋಷನ್ ಕೆ, ಗುರುಪ್ರಸಾದ್ ಉಡ್ದೋಳಿ, ಕಿಶೊಕರ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.










