ಸುಳ್ಯದ ರಥಬೀದಿಯ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿದ್ದ ಗಣೇಶ್ ವಾಚ್ ವರ್ಕ್ಸ್ ಮತ್ತು ಮ್ಯೂಸಿಕಲ್ಸ್ ಸಂಸ್ಥೆಯು ಮೇ.23 ರಂದು ಗಾಂಧಿನಗರದ
ಕಲ್ಪತರು ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.















ಕೊಲ್ಲೂರು ಕ್ಷೇತ್ರದ ವಚತ್ ಭುವಾನಂದ ಸರಸ್ವತಿಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಉಮೇಶ್ ಪಿ.ಕೆ, ಕಾಂಪ್ಲೆಕ್ಸ್ ಮಾಲಕ ಬಿ.ಎಲ್.ಶಿವರಾಮ, ತಿಮ್ಮಪ್ಪ ಗೌಡ ನಾವೂರು, ಸಹೋದರ ಗೋಪಾಲ ಆಚಾರ್ಯ, ಕಿಶೋರ್ ಆಚಾರ್ಯ, ಶಶಿಧರ ಆಚಾರ್ಯ, ಭಾಸ್ಕರ ಆಚಾರ್ಯ, ಶ್ರೀಮತಿ ಯಶೋಧ ಪುಂಡರೀಕ,
ಶ್ರೀಮತಿ ಶಶಿ ಗಣೇಶ್ ಆಚಾರ್ಯ,ಶ್ರೀಮತಿ ನಮಿತಾನವೀನ್ ಆಚಾರ್ಯ, ಪ್ರತೀಕ್ ಆಚಾರ್ಯ, ಕಾವ್ಯ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ಬಿ.ಎಸ್. ಗಣೇಶ್ ಆಚಾರ್ಯ ರವರು ಸರ್ವರನ್ನೂ ಸ್ವಾಗತಿಸಿದರು.
ಯಾವುದೇ ಕಂಪನಿಯ ಹಳೆಯ ವಾಚ್ ರಿಪೇರಿ,ಹಳೆ ಮಾದರಿಯ ಗೋಡೆ ಗಡಿಯಾರ ದುರಸ್ತಿ ಹಾಗೂ ಎಲ್ಲಾ ರೀತಿಯ ವಾಚ್ ಗಳಿಗೆ ಗ್ಲಾಸ್ ವರ್ಕ್ಸ್ ಮತ್ತು
ಮೊಬೈಲ್ ಲೆನ್ಸ್
ಗ್ಲಾಸ್ ವರ್ಕ್ ಮಾಡಿಕೊಡಲಾಗುವುದು. ಕಳೆದ 36 ವರ್ಷಗಳಿಂದ ಗಣೇಶ್ ಮ್ಯೂಸಿಕಲ್ಸ್ ಕಲಾ ತಂಡವನ್ನು ಸ್ಥಾಪಿಸಿ ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ಸಂಗೀತಾಸಕ್ತರಿಗೆ ಸಂಗೀತ ತರಬೇತಿ ತರಗತಿಗಳನ್ನು ಸುಳ್ಯ, ಪುತ್ತೂರು, ಮಡಿಕೇರಿ, ಕಾಸರಗೋಡು,
ಕಡಬ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ ಎಂದು ಮಾಲಕರು ತಿಳಿಸಿದರು.










