














2024 -25 ನೇ ಸಾಲಿನ ಪರೀಕ್ಷೆ ಬರೆದ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯ ರಿಶೋನ್ ಡಿಸೋಜನಿಗೆ ಮರುಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ 9 ಅಂಕ ಪಡೆದು ಇದೀಗ 603 ಅಂಕ ಪಡೆದಿದ್ದಾರೆ. ಕಳೆದ ಬಾರಿ ಪಲಿತಾಂಶ ಘೋಷಣೆಯಾದಾಗ 594 ಅಂಕ ಪಡೆದಿದ್ದ ರಿಶೋನ್, ಇಂಗ್ಲಿಷ್ ನಲ್ಲಿ ಮರುಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ 9 ಅಂಕ ಪಡೆದು ಇದೀಗ ಒಟ್ಟು 603 ಅಂಕ ಪಡೆದಿದ್ದಾರೆ.
ಇವರು ಸುಳ್ಯದ ರೊನಾಲ್ಡ್ ಡಿಸೋಜ ಹಾಗೂ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲಾ ಶಿಕ್ಷಕಿ ಮರಿಯ ಕ್ರಾಸ್ತರವರ ಪುತ್ರ.










