















ಪೆರುವಾಜೆ ಶ್ರೀ ಜಲದುರ್ಗಾ ದೇವಿ ಉದ್ಭವ ಆದ ದೇವರಮಾರು ಎಂಬಲ್ಲಿ ಸಂ ನಂ 98/2 ರ ಜಮೀನು ಆಕ್ರಮಣ ನಡೆಯುತ್ತಿರುವುದನ್ನು ಗಮನಿಸಿ ಶ್ರೀ ಜಲದುರ್ಗಾ ದೇವಿ ಉದ್ಭವ ದೇವರಮಾರು ಸಮಿತಿ ಸಂಚಾಲಕ ನಿತಿನ್ ರಾಜ್ ಶೆಟ್ಟಿ ಮತ್ತು ಸಹ ಸಂಚಾಲಕ ಅಂಗಾರ ಬಜ ಇವರು ಪೆರುವಾಜೆ ಗ್ರಾಮ ಪಂಚಾಯಿತಿಗೆ ಮತ್ತು ತಹಶೀಲ್ದಾರ್ ಅವರಿಗೆ ಮನವಿ ಮಾಡಿದ ಪರಿಣಾಮ ದೇವರ ಉದ್ಭವ ಸ್ಥಳದ ಸುತ್ತ ಮುತ್ತಲಿನ ಸರ್ಕಾರಿ ಜಾಗವನ್ನು ಮೀಸಲಿಡಲು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ, ಜಿಲ್ಲಾ ಧಾರ್ಮಿಕ ಪರಿಷತ್ ಸಹಾಯಕ ಆಯುಕ್ತರಿಗೆ ಹಾಗೂ ಸುಳ್ಯ ತಹಶೀಲ್ದಾರ್ ಅವರಿಗೆ ಪತ್ರ ರವಾನೆ ಮಾಡಿರುವುದಾಗಿ ಸಂಚಾಲಕ ನಿತಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.










