ಆಲೆಟ್ಟಿ ಸರಕಾರಿ ಪ್ರೌಢಶಾಲೆಗೆ ಮರುಮೌಲ್ಯಮಾಪನದಲ್ಲಿ ಶೇ.೧೦೦% ಫಲಿತಾಂಶ

0

ಆಲೆಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಒಟ್ಟು 28 ವಿದ್ಯಾರ್ಥಿಗಳು ಹಾಜರಾಗಿದ್ದು 27 ಮಂದಿ ತೇರ್ಗಡೆ ಹೊಂದಿದ್ದರು. ಓರ್ವ ವಿದ್ಯಾರ್ಥಿ ಜಿತಿನ್ ಜೇಕಬ್ ಇಂಗ್ಲೀಷ್ ವಿಷಯದಲ್ಲಿ ಮಾತ್ರ ಅನುತ್ತೀರ್ಣರಾಗಿದ್ದು ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಲಾಗಿತ್ತು. ಇದೀಗ ಮರು ಮೌಲ್ಯ ಮಾಪನದ ಫಲಿತಾಂಶ ಬಂದಿದ್ದು ಹೆಚ್ಚುವರಿ 5 ಅಂಕ ಲಭಿಸಿದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ.100% ಫಲಿತಾಂಶ ಘೋಷಣೆಯಾಗಿದೆ. ವಿದ್ಯಾರ್ಥಿ ಜಿತಿನ್ಬ ಡ್ಡಡ್ಕದರಂಗತ್ತಮಲೆಯ ಬಿನು ಜೇಕಬ್ ಮತ್ತು ಜಿಪ್ಸಿ ಬಿನು ದಂಪತಿಯ ಪುತ್ರ.