ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ವಾಹನಗಳು
ಇಂತಹ ಸ್ಪರ್ಧೆಗಳು ನಮ್ಮಲ್ಲಿ ಬೆಳೆಯಬೇಕು, ಈ ಕಾರ್ಯಕ್ರಮ ಶ್ಲಾಘನೀಯ: ಅಕ್ಷಯ್ ಕೆ ಸಿ
ಸಂಪಾಜೆ: ಕಲ್ಲುಗುಂಡಿಯಲ್ಲಿ ಪ್ರಪ್ರಥಮ ಬಾರಿಗೆ ಆಫ್ ರೋಡ್ ಅಡ್ವೆಂಚರ್ ಕಾರ್ಯಕ್ರಮ ಇ ಪಿ ರಾಜು ರವರ ಗದ್ದೆಯಲ್ಲಿ ಸ್ಥಳೀಯ ಯುವಕರ ನೇತೃತ್ವದಲ್ಲಿ ಮೇ 24 ರಂದು ನಡೆಯಿತು.
ಕಾರ್ಯಕ್ರಮವನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನಲ್ ಆಫ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಕೆ.ಸಿ.ಅಕ್ಷಯ್ ರವರು ಉದ್ಘಾಟಿಸಿ ಮಾತನಾಡಿ ಈ ಭಾಗದ ಯುವಕರ ತಂಡ ಈ ಒಂದು ಅದ್ಭುತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇಂತಹ ಸ್ಪರ್ಧೆಗಳು ನಮ್ಮಲ್ಲಿ ಬೆಳೆಯಬೇಕು ಮತ್ತು ನಮ್ಮೆಲ್ಲರ ಪ್ರೋತ್ಸಾಹ ಕೂಡ ಇರಬೇಕು ಎಂದು ಕಾರ್ಯಕ್ರಮದ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಪಾಜೆ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ವಹಿಸಿದ್ದರು.















ವೇದಿಕೆಯಲ್ಲಿ ಪಯಶ್ವಿನಿ ಬ್ಯಾಂಕ್ ಸಂಪಾಜೆ ಅಧ್ಯಕ್ಷ ಅನಂತ ಊರುಬೈಲು, ಕಲ್ಲುಗುಂಡಿ ವರ್ತಕರ ಸಂಘದ ಅಧ್ಯಕ್ಷ ಯು.ಪಿ.ಚಕ್ರಪಾಣಿ, ಸಂಯೋಜಕ ಸ್ಥಳ ಧಾನಿ ಇ.ಪಿ.ರಾಜು, ಶಾಹಿಲು ಫಾಸ್ಟ್ ಟ್ರೇಕ್, ಪ್ರಶಾಂತ್ ಹಾಗೂ ಈ ಕಾರ್ಯಕ್ರಮದ ರೂವಾರಿಗಳಾದ ಇಶಾನ್, ಅಭಿಷೇಕ್, ವಿನ್ಸಂಟ್ ಮೊದಲಾದವರು ಉಪಸ್ಥಿತರಿದ್ದರು.

ಆಫ್ ರೋಡ್ ಅಡ್ವೆಂಚರ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ಕೊಡಗು ಭಾಗಗಳಿಂದ ಆಗಮಿಸಿದ ಹಾಗೂ ಸ್ಥಳೀಯ ವಾಹನಗಳು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ವಾಹನ ಸ್ಪರ್ಧಿಗಳು ಭಾಗವಹಿಸಿ ಸಾಹಸ ಪ್ರದರ್ಶನ ನೀಡಿದರು.

ಅಡ್ವೆಂಚರ್ ರ್ಯಾಲಿ ಬಹಳ ಸಾಹಸಮಯವಾಗಿ ನಡೆದು ನೋಡುಗರ ಗಮನ ಸೆಳೆಯಿತು.










