ಪೆರುವಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೆರುವಾಜೆ ಶುಭ ನಗರ ದಿಂದ ನಾಗಂಡ — ಕೊಲ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ, ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಓಡಾಟ ನಡೆಸಲು ಕಷ್ಟ ಆಗಿರುವುದನ್ನು ಮನಗಂಡು ಈ ಬಾರಿಯ ಮಳೆಗಾಲದಲ್ಲಿ ಸಂಚಾರಕ್ಕೆ ತೊಂದರೆ ಆಗುವುದನ್ನು ತಪ್ಪಿಸಲು ಕೊಲ್ಯ ನಾಗೇಶ್ ಪೂಜಾರಿ ಅವರ ಮನೆಯಲ್ಲಿ ಗ್ರಾಮಸ್ಥರು ಸಭೆ ನಡೆಸಿದರು.
ಈ ರಸ್ತೆ ಗೆ ಮಂಜೂರಾದ ಹಣ ಬೇರೆ ಕಡೆ ವರ್ಗಾವಣೆ ಆಗಿದ್ದು ಇದಕ್ಕೆ ಬದಲಿ ಅನುದಾನ ಒದಗಿಸುವಂತೆ ಶಾಸಕಿ ಕು ಭಾಗೀರಥಿ ಅವರಿಗೆ ಮನವಿ ಮಾಡುವಂತೆ ಮತ್ತು ತಾತ್ಕಾಲಿಕ ಸಮಸ್ಯೆ ಬಗೆಹರಿಸಲು ಗ್ರಾಮ ಪಂಚಾಯಿತಿಗೆ ಮನವಿ ಮಾಡಲು ತಿರ್ಮಾನಿಸಲಾಯಿತು.















ಈ ಸಭೆಯಲ್ಲಿ ಸಚಿನ್ ರಾಜ್ ಶೆಟ್ಟಿ, ವೆಂಕಪ್ಪ ಗೌಡ ನಾರ್ಕೋಡು, ಸಂಜೀವ ಪೂಜಾರಿ, ಕಿಶೋರ್ ರಾವ್ ,ಅಜೈಶೆಟ್ಟಿ, ಗಣೇಶ ಪೂಜಾರಿ, ಲಿಂಗಪ್ಪ ಆಚಾರಿ, ಗಿರೀಶ್ ಪೂಜಾರಿ, ಹರೀಶ್ ಪೂಜಾರಿ, ಲಿಂಗಪ್ಪ ಪೂಜಾರಿ, ಶ್ರೀಮತಿ ಶಶಿರೇಖಾ ಉಪಸ್ಥಿತರಿದ್ದರು.










