ಮಳೆಯ ನಡುವೆಯೂ ನಡೆದ ಅರಂತೋಡು ಗ್ರಾಮ ಪಂಚಾಯತ್ ರಾಷ್ಟ್ರೀಯ ಹೆದ್ದಾರಿ 72ನೇ ಸ್ವಚ್ಛತಾ ಕಾರ್ಯಕ್ರಮ

0

ಅರಂತೋಡು ಗ್ರಾಮ ಪಂಚಾಯತ್‌ನ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತೆಯ 27 ತಿಂಗಳ ಕಾರ್ಯಕ್ರಮ ಮೇ. ೨೫ರಂದು ಬೆಳಿಗ್ಗೆ ಮಾತೃ ಶಕ್ತಿ ದುರ್ಗಾ ವಾಹಿನಿ ಹನುಮಾನ್ ಶಾಖೆ ಆರಂತೋಡು ಮತ್ತು ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ (VHSNC) ಅರಂತೋಡು ಇದರ ಸಹಕಾರದೊಂದಿಗೆ ನಡೆಯಿತು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ, ಸ್ವಚ್ಛತಾ ಘಟಕದ ಸದಸ್ಯರು ಮತ್ತು ಊರ ನಾಗರಿಕರು ಭಾಗವಹಿಸಿದ್ದರು.