ಮಂಡೆಕೋಲು : ಮನೆ ಮೇಲೆ ಮರ ಬಿದ್ದು ಹಾನಿ

0

ಬಾರೀ ಮಳೆಯ ಪರಿಣಾಮ ಮನೆ ಸಮೀಪದ ಮರವೊಂದು ಮಗುಚಿ ಬಿದ್ದು ಹಾನಿ ಸಂಭವಿಸಿರುವ ಘಟನೆ ಮಂಡೆಕೋಲಿನ ಮಾರ್ಗ ಎಂಬಲ್ಲಿ ಮೇ.25ರಂದು ಮಧ್ಯಾಹ್ನ ನಡೆದಿದೆ.

ಮಾರ್ಗ ನಿವಾಸಿ ಕುಂಞಾಬೀನಾ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಕುಂಞಾಬೀನಾರವರು ಒಬ್ಬರೇ ಮನೆಯಲ್ಲಿದ್ದು, ಮೇ.25ರಂದು ಮದುವೆಗೆಂದು ಹೋಗಿದ್ದರು. ಮಧ್ಯಾಹ್ನ ವೇಳೆಗೆ ಮನೆ ಸಮೀಪ, ಫಾರೆಸ್ಟ್ ನಲ್ಲಿದ್ದ ಮರವೊಂದು ಮಗುಚಿ ಇವರ ಮನೆ ಮೇಲೆ ಬಿದ್ದಿದೆ.

ಸ್ಥಳಕ್ಕೆ ಗ್ರಾಮ ಪಂಚಾಯತ್ ನವರು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.