ಅರಂತೋಡು ಎನ್.ಎಂ.ಪಿ.ಯು ವಿದ್ಯಾರ್ಥಿನಿ ಆಯಿಷತ್ ಅನ್ಶಫಾ ರವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ 598 ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದು ಇವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸುಳ್ಯದ ರಥಬೀದಿ ಯಲ್ಲಿ ಕಾರ್ಯಚರಿಸುತ್ತಿರುವ ಹನೀಫ್ ಅಲ್ಫಾ ಮಾಲಕತ್ವ ಅಲ್ಫಾ ಕಿಡ್ಸ್ ವೇರ್ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.















ಇವರಿಗೆ ಸುಳ್ಯ ನಗರ ಯೋಜನಾ ಪ್ರಾಧಿಕಾರ (ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ರವರು ಸನ್ಮಾನಿಸಿದರು. ಈ ಸಂಧರ್ಭದಲ್ಲಿ ನ ಪಂ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್, ಸಂಸ್ಥೆಯ ಮಾಲಕರಾದ ಹನೀಫ್ ಆಲ್ಫಾ,ಸಾಲಿ ಕಟ್ಟೆಕ್ಕಾರ್,ಬಶೀರ್ ಅಲ್ಫಾ, ಸ್ಥಳೀಯ ಉಧ್ಯಮಿ ಝಿಯಾದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.










