ಸಂಪಾಜೆ : ಗಾಳಿ – ಮಳೆಗೆ ಹಲವೆಡೆ ಹಾನಿ

0

ಧಾರಾಕಾರ ಗಾಳಿ – ಮಳೆಗೆ ಸಂಪಾಜೆ , ಕಲ್ಲುಗುಂಡಿ, ಗೂನಡ್ಕ ,ವ್ಯಾಪ್ತಿಯಲ್ಲಿ ಮರ ಬಿದ್ದು ಹಲವೆಡೆ ಹಾನಿಯಾದ ಘಟನೆ ಮೇ,25 ರಂದು ವರದಿಯಾಗಿದೆ.

ಗೂನಡ್ಕ ಪೇರಡ್ಕ ಮೊಹಿಯದ್ದೀನ್ ಜುಮಾ ಮಸೀದಿಯ ಪ್ರವಾಸೋದ್ಯಮದ ನೂತನ ಕಟ್ಟಡಕ್ಕೆ ಮಾವಿನ ಮರ ಬಿದ್ದು ಮೇಲಿನ ಸ್ಲಾಫ್ ಗೆ ಹಾನಿ , ಹಾಗೂ ವಿದ್ಯುತ್ ಕಂಬಗಳು , ಟ್ರಾನ್ಸ್ ಫಾರ್ಮ್ ರಸ್ತೆಗೆ ಬಿದ್ದು ವಿದ್ಯುತ್ ಕಂಬ ತುಂಡಾಗಿ ರಸ್ತೆಗೆ ಬಿದ್ದಿದೆ. ಕಲ್ಲುಗುಂಡಿ ದಂಡೆಕಜೆ ಲಕ್ಷ್ಮಿ ಅವರ ಮನೆಗೆ ಮರ ಬಿದ್ದು ಹಂಚು, ಮನೆಯ ಚಾವಣಿಯ ಗೋಡೆಗೆ ಹಾನಿಯಾಗಿದೆ.