ಗಾಂಧಿನಗರ ಗುರುಂಪು ರಸ್ತೆಯಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ರಸ್ತೆ ಕೊಚ್ಚಿ ಹೋಗುತ್ತಿದೆ.
















ಇತ್ತೀಚೆಗೆ ನಡೆದ ಪೈಪ್ ಲೈನ್ ಕಾಮಗಾರಿಯಿಂದ ಚರಂಡಿಗಳು ಮುಚ್ಚಿ ಹೋಗಿದ್ದು ಮಳೆ ನೀರು ರಸ್ತೆಯಲ್ಲಿಯೇ ಹರಿಯುವಂತಾಗಿದೆ.
ವಾಹನ ಸವಾರರಿಗೂ ತೊಂದರೆಯಾಗಿದ್ದು ರಸ್ತೆಯ ಪಕ್ಕದಲ್ಲಿರುವ ಮನೆಯವರಿಗೂ ಇದರಿಂದ ತೊಂದರೆಯಾಗುತ್ತಿದೆ.

ಸುರಿಯುತ್ತಿರುವ ಭಾರೀ ಮಳೆಗೆ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ತೊಂದರೆಯಾಗಿದೆ.
ಗುರುಂಪು ವ್ಯಾಪ್ತಿಯಲ್ಲಿ ನಗರ ಪಂಚಾಯತ್ ನ ಇಬ್ಬರು ಸದಸ್ಯರಿದ್ದು ಅವರಿಗೆ ಮಾಹಿತಿ ನೀಡಿದರೂ ಯಾರೂ ಸ್ಪಂದಿಸಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.










