ಯಾರ ಬಗ್ಗೆ ಹೆಚ್ಚು ಅಪಪ್ರಚಾರ ನಡೆಯಿತೋ ಅವನನ್ನೇ ದೇವರು ಅಧ್ಯಕ್ಷನನ್ನಾಗಿಸಿದ : ಇಂಜಾಡಿ
ಸುಬ್ರಹ್ಮಣ್ಯದಲ್ಲಿ ಬಡವರ ಸಣ್ಣ ಸಣ್ಣ ಅಂಗಡಿಗೆ ಅವಕಾಶ ನೀಡಿ : ರವಿ ಕಕ್ಕೆಪದವು
ಯಾರ ಬಗ್ಗೆ ಹೆಚ್ಚು ಅಪಪ್ರಚಾರ ನಡೆಯಿತೋ ಅವನನ್ನೆ ಸುಬ್ರಹ್ಮಣ್ಯ ದೇವರು ಅಧ್ಯಕ್ಷನನ್ನಾಗಿಸಿದ ಎಂದು
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಹರೀಶ್ ಇಂಜಾಡಿ ಹೇಳಿದರು.

ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಮೇ.26 ರಂದು ರವಿ ಕಕ್ಕೆಪದವು ಅವರ ಮನೆಯಲ್ಲಿ ಹರೀಶ್ ಇಂಜಾಡಿ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ಸೌಮ್ಯ ಭರತ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.















ರವಿಯಣ್ಣ ಅವರು ನಿಸ್ವಾರ್ಥ ಸೇವೆ ನೀಡುವವರು. ಯಾವುದೇ ಅಧಿಕಾರ ಇಲ್ಲದೆ ಸಾರ್ವಜನಿಕ ಸೇವೆ ಮಾಡವ ಕಾರಣ ಜನ ಅವರ ಬಳಿ ಬರುತ್ತಾರೆ. ನಾವೆಲ್ಲಾ ಅಧಿಕಾರ ಪಡೆದು ಸೇವೆ ಮಾಡುವವರಾಗಿದ್ದೇವೆ. ರವಿಯಣ್ಣ ಅಂತವರು ಸುಬ್ರಹ್ಮಣ್ಯದಲ್ಲಿ ಬೇಕಾದಷ್ಟು ಜನ ಇದ್ದರೂ ಸ್ವಚ್ಚತಾ ಸೇವೆ, ಇತರೇ ಸೇವೆ ನಡೆಸುವ ಕೆಲಸ ರವಿಯಣ್ಣ ಮಾತ್ರ ಮಾಡುತ್ತಾರೆ ಅಂದರೆ ಅದು ಅವರ ಕಳಕಳಿ ಎಂದರು. ರವಿ ಕಕ್ಕೆಪದವು ಅವರು ಸುಬ್ರಹ್ಮಣ್ಯ ದೇವಸ್ಥಾನದದಲ್ಲಿ ಆಶ್ಲೇಷ ಪೂಜಾ ಕಟ್ಟಡ ರಚಿಸಲು, ದೇವಸ್ಥಾನದ ವಿದ್ಯಾ ಸಂಸ್ಥೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ವ್ಯವಸ್ಥೆ ಬಗ್ಗೆ ಹಾಗೂ ಕ್ರೀಡಾ ಚಟುವಟಿಕೆ ಪ್ರೋತ್ಸಾಹ ಬಗ್ಗೆ, ಸುಬ್ರಹ್ಮಣ್ಯದಲ್ಲಿ ಆರೋಗ್ಯ ಸೇವೆ ಸುಧಾರಿಸಲು, ಸ್ವಚ್ಚತೆ ಬಗ್ಗೆ ಹಾಗೂ ಇತರೇ ವ್ಯವಸ್ಥೆ ಬಗ್ಗೆ ಮನವಿ ಮಾಡಿದ್ದಾರೆ ಅದನ್ನೆಲ್ಲಾ ಖಂಡಿತ ಪರಿಗಣಿಸುವುದಾಗಿ ತಿಳಿಸಿದರು ಎಂದರು.
ನನಗೆ ಟ್ರಸ್ಟಿ ಆಗಲೂ ಅವಕಾಶ ಇರಲಿಲ್ಲ, ಇನ್ನು ಅಧ್ಯಕ್ಷತೆ ವಿಚಾರ ಊಹಿಸಲು ಸಾಧ್ಯವಾಗದಂತಾಗಿತ್ತು. ಆದರೆ ದೇವರ ಅನುಗ್ರಹ ಹೇಗಿತ್ತೆಂದರೆ ಯಾರ ಬಗ್ಗೆ ಅತಿ ಹೆಚ್ಚು ಅಪಪ್ರಚಾರ ವಾಯಿತೋ ಅವನನ್ನೇ ಅಧ್ಯಕ್ಷತೆಗೆ ಕೂತು ಕೊಳ್ಳಿಸಿ ಸೇವೆ ಮಾಡಲು ಅವಕಾಶ ನೀಡಿದ್ದಾನೆ. ನನಗೆ ಸುಬ್ರಹ್ಮಣ್ಯದ ಸಮಸ್ಯೆಯ ಬಗ್ಗೆ ಅರಿವು ಇದೆ. ಖಂಡಿತ ಅತಿ ಹೆಚ್ಚು ಸಮಯ ನೀಡಿ ಸೇವೆ ಮಾಡುತ್ತೇನೆ ಎಂದರು.
ಅಭಿನಂದಿಸಿ ಮಾತನಾಡಿದ ರವಿ ಕಕ್ಕೆಪದವು ಅವರು ನಾನು ಸುಬ್ರಹ್ಮಣ್ಯ ಕ್ಕೆ ಬಂದಲ್ಲಿಂದ ಹರೀಶ್ ಇಂಜಾಡಿ ಬಹಳಷ್ಟು ಸಹಕರಿಸಿದರು,
ನಮ್ಮ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ಸ್ನಾನ ಘಟ್ಟದ ಬಳಿ ಮಹಿಳೆಯರಿಗೆ ಸ್ನಾನ ಗೃಹದ ವ್ಯವಸ್ಥೆ ಸರಿ ಇಲ್ಲ . ಅದರ ಬಗ್ಗೆ ಗಮನ ಹರಿಸಬೇಕು, ಸುಬ್ರಹ್ಮಣ್ಯ ಈ ಹಿಂದೆ 300 ಕ್ಕೂ ಅಧಿಕ ಸಣ್ಣ ಸಣ್ಣ ಅಂಗಡಿಗಳಿದ್ದವು ಅಂತವರಿಗೆ ಮತ್ತೆ ಅವಕಾಶ ನೀಡಬೇಕು. ಇದರಿಂದ ತುಂಬಾ ಬಡ ಕುಟುಂಬಗಳು ಜೀವನ ಸಾಗಿಸುತ್ತವೆ ಎಂದರು. ಸ್ವಚ್ಚತೆ, ಆರೋಗ್ಯ, ಭಕ್ತರ ಸಮಸ್ಯೆ ಮುಂತಾದ ಜ್ವಲಂತ ಸಮಸ್ಯೆ ಬಗ್ಗೆ ಗಮನ ಕೊಡುವಂತೆ ಕೇಳಿ ಕೊಂಡರು.
ಶ್ರೀಮತಿ ಗೀತಾ ರವಿ ಕಕ್ಕೆಪದವು, ಕಾರ್ತಿಕ್ ಕಕ್ಕೆಪದವು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನ ಹಲವು ಸದಸ್ಯರು ಉಪಸ್ಥಿತರಿದ್ದರು.










