ಟಿ.ಎಂ.ಶಹೀದ್ ಮನೆಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಭೇಟಿ – ಸಾಂತ್ವನ

0

ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ರವರ ತಾಯಿ ಆಯಿಷ ಹಜ್ಜುಮ್ಮ ತೆಕ್ಕಿಲ್ ರವರ ನಿಧನದ ಹಿನ್ನಲೆಯಲ್ಲಿ ಕರ್ನಾಟಕ ಸರಕಾರ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ರವರು ಮೇ. 25 ರಂದು ಟಿ.ಎಂ.ಶಹೀದರ ಅರಂತೋಡಿನ ತೆಕ್ಕಿಲ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.


ಈ ಸಂದರ್ಭದಲ್ಲಿ ಟಿ.ಎಂ.ಶಹೀದ್ ತೆಕ್ಕಿಲ್, ಟಿ.ಎಂ.ಶಮೀರ್ ತೆಕ್ಕಿಲ್, ಟಿ.ಎಂ.ಜಾವೇದ್ ತೆಕ್ಕಿಲ್, ಟಿ.ಎಂ.ಶಾಝ್ ತೆಕ್ಕಿಲ್, ಸುಳ್ಯ ನಗರ ಪ್ರಾಧಿಕಾರ ಅಧ್ಯಕ್ಷ ಕೆ.ಎಂ ಮುಸ್ತಫ, ಕಾಂಗ್ರೆಸ್ ಮುಖಂಡರುಗಳಾದ ರಾಧಾಕೃಷ್ಣ ಬೊಳ್ಳೂರು, ಇಕ್ಬಾಲ್ ಎಲಿಮಲೆ, ಸಿದ್ಧಿಕ್ ಕೊಕ್ಕೊ, ಪಿ.ಎ.ಮಹಮ್ಮದ್ ಸುಳ್ಯ, ಶಶಿಧರ ಎಂ.ಜೆ, ಗೋಕುಲ್ ದಾಸ್, ಇಕ್ಬಾಲ್ ಕಡಬ, ಸಲೀಮ್ ಪೆರುಂಗೋಡಿ, ತಾಜುದ್ದೀನ್ ಅರಂತೋಡು, ಜುಬೈರ್ ಮೊದಲಾದವರು ಉಪಸ್ಥಿತರಿದ್ದರು.