ಅಜ್ಜಾವರ ಗ್ರಾಮದ ನೀಲಗಿರಿ ಅಡ್ಕದಿಂದ ಹೊರಟು ಕರ್ಲಪ್ಪಾಡಿ ದೇವಸ್ಥಾನ, ಮುಖಾಂತರ ಪಂಡವೈಲು, ಕರ್ಲಪ್ಪಾಡಿ, ಮೇದಿನಡ್ಕ, ಕುಡೆಂಬಿ, ಕೋಲ್ಚಾರು ಹೋಗುವ ರಸ್ತೆ ಅವ್ಯವಸ್ಥೆ ಯಾಗಿ ಸಂಚಾರ ದುಸ್ತರವಾಗಿದೆ.
















ಇತ್ತೀಚೆಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಅನ್ವಯ ಪೈಪ್ ಲೈನ್ ಗಾಗಿ ರಸ್ತೆ ಬದಿ ಅಗೆದ ಕಾರಣ ಮಣ್ಣೆಲ್ಲಾ ರಸ್ತೆಗೆ ಬಂದು ನಿಂತು ಸಂಚಾರ ಬಹಳ ಕಷ್ಟ ಎನಿಸಿದೆ. ಗ್ರಾಮಾಡಳಿತವಾದರೂ ಸೂಕ್ತ ಕ್ರಮ ಕೈಗೊಂಡು ಸಂಚಾರಕ್ಕೆ ಅನುಕೂಲ ಮಾಡಿಕೊಡ ಬೇಕಾಗಿ ಈ ಭಾಗದ ಜನರು ಕೇಳಿಕೊಂಡಿದ್ದಾರೆ .










