ಕನಕಮಜಲು ಗ್ರಾ.ಪಂ. ಉಪಚುನಾವಣೆ

0

ಬಿಜೆಪಿ ಬೆಂಬಲಿತ ಜಗನ್ನಾಥ ಮಾಣಿಮಜಲು ಗೆಲುವು

ಕನಕಮಜಲು ಗ್ರಾಮ ಪಂಚಾಯತ್ ಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ‌ ಬೆಂಬಲಿತ ಅಭ್ಯರ್ಥಿ ಜಗನ್ನಾಥ ಮಣಿಮಜಲು ಗೆಲುವು ಸಾಧಿಸಿದ್ದಾರೆ.

ಕನಕಮಜಲು ಗ್ರಾಮ ಪಂಚಾಯತ್ ನಲ್ಲಿ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ಮೇ.25ರಂದು ಚುನಾವಣೆ ನಡೆದಿದ್ದು, ಮತ ಎಣಿಕೆ ಮೇ.28ರಂದು ಸುಳ್ಯ ತಾಲೂಕು‌ ಕಚೇರಿಯಲ್ಲಿ ನಡೆಯಿತು.

ಬೆಳಗ್ಗೆ 8 ಗಂಟೆ ಸುಮಾರಿಗೆ ಮತ ಎಣಿಕೆ ಆರಂಭಗೊಂಡು 9 ರ‌ ಸುಮಾರಿಗೆ ಎಣಿಕೆ ಕಾರ್ಯ ಪೂರ್ಣಗೊಂಡು ಫಲಿತಾಂಶ ಹೊರಬಂತು.

ಒಟ್ಟು 668 ಮತದಾನವಾಗಿದ್ದು ಅದರಲ್ಲಿ ಬಿಜೆಪಿಯ ಜಗನ್ನಾಥ ಮಾಣಿಮಜಲು 374 ಮತ ಪಡೆದು‌ ಜಯಗಳಿಸಿದರೆ, ಕಾಂಗ್ರೆಸ್ ಬೆಂಬಲಿತ‌ ಹೇಮಚಂದ್ರ ಕುತ್ಯಾಳ 291 ಮತಗಳನ್ನು ಪಡೆದುಕೊಂಡರು. 3 ಮತ ಅಸಿಂಧುವಾಗಿತ್ತು.

ಚುನಾವಣಾಧಿಕಾರಿ ಸುಳ್ಯ‌ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿವಪ್ರಸಾದ್ ಮತ ಎಣಿಕೆ ಕಾರ್ಯ ನಡೆಸಿಕೊಟ್ಟರು.