ಸುಳ್ಯ ತಾಲೂಕು ಸವಿತಾ ಸಮಾಜ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

0

ಸುಳ್ಯ ತಾಲೂಕು ಸವಿತಾ ಸಮಾಜದ ಆಶ್ರಯದಲ್ಲಿ ಸವಿತಾ ಸೌಹಾರ್ದ ಸಹಕಾರ ಸಂಘದ ಸಹಕಾರದೊಂದಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ವಿತರಣಾ ಕಾರ್ಯಕ್ರಮ ಮೇ.27 ರಂದು ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನೆರವೇರಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಿತಾ ಸಮಾಜದ ಅಧ್ಯಕ್ಷ ಉದಯ ಜಟ್ಟಿಪಳ್ಳ ವಹಿಸಿದ್ದರು. ಪ್ರತಿಭಾ ಪುರಸ್ಕಾರವನ್ನು ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ. ನೀರಬಿದಿರೆ ನೆರವೇರಿಸಿದರು. ಬರೆಯುವ ಪುಸ್ತಕಗಳನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿಯವರು ವಿತರಿಸಿದರು.


ಸಿ.ಡಿ.ಪಿ.ಒ. ಶೈಲಜಾ ದಿನೇಶ್ ಕುಕ್ಕುಜಡ್ಕ, ದ.ಕ.ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಅಸನಂದ ಭಂಡಾರಿ ಗುಂಡದಡೆ, ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ವಿಶ್ವನಾಥ ಸಾಲಿಯಾನ್ ಬಂಟ್ವಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.


ತಾಲೂಕು ಸವಿತಾ ಸಮಾಜದ ಗೌರವಾಧ್ಯಕ್ಷ ಗುರುರಾಜ್ ಅಜ್ಜಾವರ, ಗೌರವ ಸಲಹೆಗಾರ ಹರೀಶ್ ಬಂಟ್ವಾಳ್, ಕಡಬ ತಾಲೂಕು ಘಟಕದ ಅಧ್ಯಕ್ಷ ವಸಂತ ಮೂರಾಜೆ, ಜಿಲ್ಲಾ ಘಟಕದ ರವೀಂದ್ರ ಭಂಡಾರಿ ಮಂಗಳೂರು, ತಾಲೂಕು ಘಟಕದ ಕಾರ್ಯದರ್ಶಿ ನವೀನ್ ಸೂಂತೋಡು, ಕೋಶಾಧಿಕಾರಿ ಪ್ರಸನ್ನ ಪಂಜ, ನಿರ್ದೇಶಕ ಪದ್ಮನಾಭ ಎಸ್., ಅವಿನಾಶ್ ಕೇರ್ಪಳ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.