ಕಂಬ ತುಂಡಾಗಿ 6 ಟಿಸಿ ಗಳಿಗೆ ಸಂಪರ್ಕ ಕಡಿತ















ಕಳಂಜ ಗ್ರಾಮದ ಕೊಲ್ಲರ್ನೂಜಿ ಬಳಿಯ ಕೋಟೆ ದೇವಸ್ಥಾನಕ್ಕೆ ತಿರುಗುವಲ್ಲಿ ವಿದ್ಯುತ್ ಕಂಬದ ಮೇಲೆ ಮರಬಿದ್ದು, ಕಂಬ ಮಧ್ಯಭಾಗದಿಂದ ಮುರಿದ ಪರಿಣಾಮ 6 ಟಿಸಿಗಳಿಗೆ ಸಂಪರ್ಕ ಕಲ್ಪಿಸುವ ಹೆಚ್.ಟಿ. ಲೈನ್ ಸಂಪರ್ಕ ಕಳೆದುಕೊಂಡ ಘಟನೆ ಮೇ. 27ರಂದು ರಾತ್ರಿ ವರದಿಯಾಗಿದೆ.
ಕಳಂಜ ಭಾಗದ ಪವರ್ ಮೆನ್ ಕಿಶೋರ್ ಮತ್ತು ಸ್ಥಳೀಯರು ಸೇರಿ ರಾತ್ರಿಯೇ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿದರು. ಇದರೊಂದಿಗೆ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ಓ.ಎಫ್. ಸಿ ಕೇಬಲ್ ಕೂಡ ಕಟ್ ಆಗಿದ್ದು, ಸಂಪರ್ಕ ಸಾಧನ ಕಡಿತಗೊಂಡಿದೆ.
ಇಂದು (ಮೇ. 28) ಬೆಳಿಗ್ಗೆ ಸಿದ್ದಿ ಇಲೆಕ್ಟ್ರಿಕಲ್ ಗುತ್ತಿಗೆದಾರರ ಸಿಬ್ಬಂದಿಗಳು ಮತ್ತು ಪವರ್ ಮೆನ್ ಕಿಶೋರ್ ಘಟನಾ ಸ್ಥಳಕ್ಕೆ ಆಗಮಿಸಿ ಹೊಸ ಕಂಬ ಹಾಕಿ ಲೈನ್ ದುರಸ್ತಿ ಕಾರ್ಯ ಮಾಡುತ್ತಿದ್ದಾರೆ.










