ತಹಶೀಲ್ದಾರ್, ಡಿ.ಸಿ.ಎಫ್., ರೇಂಜರ್ ಜತೆ ಸಮಸ್ಯೆಗಳ ಕುರಿತು ಚರ್ಚೆ
ಸುಳ್ಯ ನಗರದ ವಿದ್ಯುತ್ ಸಮಸ್ಯೆಗೆ ತರಾಟೆ

ಸುಳ್ಯ ತಾಲೂಕಿನಾಧ್ಯಂತ ವಿಪರೀತ ಮಳೆ ಸುರಿಯುತ್ತಿದ್ದು, ಗಾಳಿ ಮಳೆಗೆ ನಿರಂತರ ಮರ, ಗೆಲ್ಲುಗಳು ವಿದ್ಯುತ್ ತಂತಿಗಳಿಗೆ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದೆ. ಈ ಬಗ್ಗೆ ವಿಪತ್ತು ನಿರ್ವಹಣೆ ಹಾಗೂ ವಿದ್ಯುತ್ ಲೈನ್ ಕ್ಲಿಯರೆನ್ಸ್ ಪರಿಣಾಮಕಾರಿಯಾಗಿ ಮೆಸ್ಕಾಂ ಅಧಿಕಾರಿಗಳಿಗೆ ಸಲಹೆ ನೀಡಿದ್ದು, ಮೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಅರಣ್ಯ ಇಲಾಖೆ ಸಹಕಾರ ನೀಡುವಂತೆ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಮೇ.28ರಂದು ಡಿಸಿಎಫ್ ಅಂಥೋನಿ ಎಸ್ ಮರಿಯಪ್ಪ ಹಾಗೂ ಸುಳ್ಯ ವಲಯ ಅರಣ್ಯ ಅಧಿಕಾರಿ ಮಂಜುನಾಥ್ ರವರನ್ನು ಭೇಟಿಯಾಗಿ ಚರ್ಚಿಸಿದರು.

ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ಪ್ರತಿಕ್ರಿಯಿಸಿ ವಿದ್ಯುತ್ ಲೈನ್ ಕ್ಲಿಯರೆನ್ಸ್ ಗೆ ಮರಗಳ ಗೆಲ್ಲು ಕಡಿಯಲು ನಮ್ಮ ಇಲಾಖೆ ಯಾವುದೇ ಸಮಸ್ಯೆ ಮಾಡುವುದಿಲ್ಲ. ಅಪಾಯಕಾರಿ ಮರಗಳನ್ನು ತೆರವು ಗೊಳಿಸಲು ನಾವು ನಮ್ಮ ಇಲಾಖೆ ಸಂಪೂರ್ಣ ತಯಾರಾಗಿದೆ. ಆದರೆ ಕೆಲವೊಂದು ಕಡೆ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಅನುಮತಿಯಾಗಿದ್ದರೂ ಸಹ ಮೆಸ್ಕಾಂ ಇಲಾಖೆ ವಿದ್ಯುತ್ ಲೈನ್ ಬಿಚ್ಚಿ ಕೊಡದೇ ಇರುವುದರಿಂದ ಮರಗಳನ್ನು ತೆರವು ಗೊಳಿಸಲು ಬಾಕಿ ಇರುತ್ತದೆ. ಮೆಸ್ಕಾಂ ಇಲಾಖೆ ಸಹಕರಿಸಿದರೆ ನಾವು ತಯಾರಾಗಿದ್ದೇವೆ ಎಂದು ಹೇಳಿದರು

.















ಸುಳ್ಯ ತಹಶೀಲ್ದಾರ್ ಭೇಟಿ
ಸುಳ್ಯ ತಹಶೀಲ್ದಾರ್ ರವರನ್ನು ಭೇಟಿ ಯಾದ ರಾಧಾಕೃಷ್ಣ ಬೊಳ್ಳೂರು ನೇತೃತ್ವದ ಕಾಂಗ್ರೆಸ್ ಮುಖಂಡರು ವಿಪತ್ತು ನಿರ್ವಹಣೆ ಮತ್ತು ಮುಂಜಾಗೃತೆ ವಿಚಾರದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆ ಸಮನ್ವಯತೆ ಸಾದಿಸಿಕೊಂಡು ಕೆಲಸ ಕಾರ್ಯ ನಿರ್ವಹಿಸಬೇಕು. ಮೆಸ್ಕಾಂ ಮತ್ತು ಅರಣ್ಯ ಇಲಾಖೆ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹನಾಧಿಕಾರಿಗಳನ್ನು ಭೇಟಿ ಯಾಗಿ ಚರ್ಚಿಸಲಾಗಿದೆ. ತಾವು ಮಳೆಗಾಲದ ಸಂದರ್ಭದಲ್ಲಿ ತುರ್ತು ಸಭೆಗಳನ್ನು ನಡೆಸಿ ಸೂಚನೆಗಳನ್ನು ನೀಡಬೇಕು ಎಂದು ಸಲಹೆ ನೀಡಲಾಯಿತು.
ಅಲ್ಲದೆ ಕಳಂಜ ಗ್ರಾಮದಲ್ಲಿ ಮೆಸ್ಕಾಂ ಭೂಗತ ಕೇಬಲ್ ಅಳವಡಿಕೆ ಮತ್ತು ಬಹುಗ್ರಾಮ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯಿಂದಾಗಿ ಮಳೆ ನೀರು ಚರಂಡಿಯಲ್ಲಿ ಹರಿಯದೆ ಕೆಲವುಕಡೆ ಭೂ ಕುಸಿತವಾಗುವ ಲಕ್ಷಣಗಳು ಇದೆ. ಅವುಗಳನ್ನು ಸಹ ಪರಿಹರಿಸಬೇಕು ಎಂದು ತಹಶೀಲ್ದಾರ್ ರವರ ಗಮನಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ್ ಕಲ್ಮಡ್ಕ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಮರ್ಕಂಜ ಕಾವೂರು ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಮೋಹಿತ್ ಹರ್ಲಡ್ಕ, ಯುವ ಮುಖಂಡ ವಿಷ್ಣುಪ್ರಸಾದ್ ಕೆದಿಲಾಯ ಉಪಸ್ಥಿತರಿದ್ದರು.
ಸುಳ್ಯ ನಗರದಲ್ಲಿ ವಿದ್ಯುತ್ ಕಡಿತಗೊಂಡಿರುವ ಕುರಿತುಮೆಸ್ಕಾಂ ಅಧಿಕಾರಿಗೆ ಕರೆ ಮಾಡಿ ತರಾಟೆಗೆತ್ತಿಕೊಂಡರೆಂದು ತಿಳಿದುಬಂದಿದೆ.










