ಜಾಲ್ಸೂರಿನ ಕಲಾವಿದರಾದ ಎಸ್.ಸತೀಶ್ ಆಚಾರ್ಯ ಮತ್ತು ಎಂ.ದಿನೇಶ ಮಹಾಬಲಡ್ಕರವರಿಗೆ ಕಲಾರತ್ನ ಪ್ರಶಸ್ತಿ

0

ಬಂಗಾರ್ ಕಲಾವಿದೆರ್ ಪುತ್ತೂರು ನಾಟಕ ತಂಡದಲ್ಲಿ ಕಲಾ ಸೇವೆ ಮಾಡುತ್ತಿರುವ ಜಾಲ್ಸೂರಿನ ಕಲಾವಿದರಾದ ಎಸ್.ಸತೀಶ್ ಆಚಾರ್ಯ ಮತ್ತು ಎಂ.ದಿನೇಶ ಮಹಾಬಲಡ್ಕರವರಿಗೆ ಮಂಗಳೂರಿನ ಪ್ರತಿಷ್ಠಿತ ಆಕ್ಸಿಸ್ ಮ್ಯಾಕ್ಸ್ ಲೈಫ್ ನೀಡುವ ಗೌರವ ಪ್ರಶಸ್ತಿಗಳಂದಾದ ಕಲಾರತ್ನ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಭಜನೆ, ಸಂಗೀತ, ನಾಟಕ, ಮೈಕ್ ಅನೌನ್ಸ್, ಗಳಲ್ಲಿ ಅನುಭವ ಹೊಂದಿರುವ ಬಹುಮುಖ ಪ್ರತಿಭೆಯ ಕಲಾವಿದರಾಗಿರುವ ಜಾಲ್ಸೂರಿನ ಸತೀಶ್ ಆಚಾರ್ಯರವರು ಜಾಲ್ಸೂರಿನಲ್ಲಿ `ಕಲಾ ಕೇಸರಿ’ ನಾಟಕ ತಂಡ ಕಟ್ಟಿ ಹಲವು ಪ್ರತಿಭೆಗಳನ್ನು ಕಲಾರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ.


ಜಾಲ್ಸೂರಿನ ಮಹಾಬಲಡ್ಕದ ದಿ| ಸುಬ್ಬ ಪಾಟಾಳಿಯವರ ಪುತ್ರರಾಗಿರುವ ದಿನೇಶ್ ಮಹಾಬಲಡ್ಕ ಉತ್ತಮ ನಾಟಕ ಕಲಾವಿದ ಹಾಗೂ ನಾಟಕ ರಂಗದಲ್ಲಿ ಸತೀಶ್ ಆಚಾರ್ಯರ ಶಿಷ್ಯರಾಗಿದ್ದಾರೆ.