ಬಾಳಿಲದಲ್ಲಿ ನಡೆದ ಘಟನೆ
ಮಗು ಮೃತಪಟ್ಟ ಐದನೇ ದಿನಕ್ಕೆ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಳಿಲದಿಂದ ವರದಿಯಾಗಿದೆ.
ಬಾಳಿಲ ಬೊಮ್ಮಣಮಜಲು ಎಂಬಲ್ಲಿನ ನಿವಾಸಿ ಬಾಲಕೃಷ್ಣ ಎಂಬವರ ಆರು ತಿಂಗಳ ಪುತ್ರಿ ಐದು ದಿನಗಳ ಹಿಂದೆ ಅಸೌಖ್ಯತೆ ಉಂಟಾಗಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿತ್ತು. ಮೇ.೨೮ರ ರಾತ್ರಿ ಬಾಲಕೃಷ್ಣ ರು ಮನೆ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೇ.೨೯ ರ ಬೆಳಗ್ಗೆ ಇದು ಮನೆಯವರ ಗಮನಕ್ಕೆ ಬಂದಿದೆ.















ಅವರಿಗೆ ೩೮ ವರ್ಷ ವಯಸ್ಸಾಗಿತ್ತು. ಮೃತರು ತಂದೆ ವೆಂಕಪ್ಪ, ತಾಯಿ ಬಾಲಕ್ಕ, ಪತ್ನಿ ಚೈತ್ರ, ಪುತ್ರ ಸಾನ್ವಿಕ್, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿರುವುದಾಗಿ ತಿಳಿದು ಬಂದಿದೆ.










