ಪಂಜ ಪಶು ಆಸ್ಪತ್ರೆಯ ಬಾಗಿಲ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಆಸ್ಪತ್ರೆಯ ಒಳಗಿದ್ದ ಇನ್ ವರ್ಟರ್ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಮೇ.26 ರಂದು ಪ್ರಕರಣ ಬೆಳಕಿಗೆ ಬಂದಿವೆ.















ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅದರಂತೆ ಮೇ 23ರ ಸಂಜೆಯಿಂದ ಮೇ 26ರ ಬೆಳಗ್ಗಿನ ನಡುವಿನ ಸಮಯದಲ್ಲಿ ಪಂಜ ಪಶು ಆಸ್ಪತ್ರೆಗೆ ಯಾರೋ ಕಳ್ಳರು ನುಗ್ಗಿ ಆಸ್ಪತ್ರೆಯ ಮುಖ್ಯದ್ವಾರದ ಬೀಗವನ್ನು ಮುರಿದು ಅಕ್ರಮವಾಗಿ ಒಳಪ್ರವೇಶಿಸಿ ಆಸ್ಪತ್ರೆಯ ಕಛೇರಿಯ ಒಳಭಾಗದಲ್ಲಿರುವ ಬ್ಯಾಟರಿ ಮೇಲೆ ಇಡಲಾಗಿದ್ದ ಇನ್ ವರ್ಟರ್ ನ್ನು ಕಳುವು ಮಾಡಿದ್ದು, ಕಳವಾದ ಸೊತ್ತುವಿನ ಮೌಲ್ಯ ರೂ.11200 ಎಂದು ಅಂದಾಜಿಸಲಾಗಿದೆ ಎಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪಂಜ ಪಶು ವೈದ್ಯಾಧಿಕಾರಿ ಡಾ.ಬಿ.ಕೆ ಸೂರ್ಯನಾರಾಯಣ ಅವರು ಪ್ರಕರಣ ದಾಖಲಿಸಿದ್ದಾರೆ.









