ಪಂಜ ಸಂತ ರೀತಮ್ಮ ಚರ್ಚ್ ಗೆ ನೂತನ ಧರ್ಮ ಗುರುಗಳು ಆಗಮನ: ಅದ್ದೂರಿ ಸ್ವಾಗತ
ಪಂಜ ಚರ್ಚ್ ನಲ್ಲಿ ವಿಶೇಷ ಪೂಜೆಯೊಂದಿಗೆ ನೂತನ ಧರ್ಮಗುರುಗಳು ವಂ.ಮೆಲ್ವೀನ್ ಜೋನ್ ಡಿ’ಸೋಜ ಅಧಿಕಾರ ಸ್ವೀಕಾರ
ನಿರ್ಗಮನ ಧರ್ಮಗುರುಗಳು ವಂ.ಅಮಿತ್ ಪ್ರಕಾಶ್ ರೋಡ್ರಿಗಸ್ ರವರಿಂದ ಚರ್ಚ್ ಭಾಂದವರಿಗೆ ಕೃತಜ್ಞತೆ ಅರ್ಪಣೆ

ಪಂಜ ಸಂತ ರೀತಮ್ಮ ಚರ್ಚ್ ನ ಧರ್ಮಗುರುಗಳಾಗಿ ವಂ.ಅಮಿತ್ ಪ್ರಕಾಶ್ ರೋಡ್ರಿಗಸ್ ರವರು ಕಳೆದ ಆರು ವರ್ಷಗಳಿಂದ ಸೇವೆಸಲ್ಲಿಸಿ ವಿಟ್ಲ ಸಂತ ರಿಟಾ ಕಾಲೇಜು ಪ್ರಾಂಶುಪಾಲರಾಗಿ ನಿಯುಕ್ತಿ ಗೊಂಡು ಸೇವೆ ಸಲ್ಲಿಸಿಸಲು ತೆರಳುತ್ತಿರುವ ಸಂದರ್ಭದಲ್ಲಿ ಪಂಜ ಚರ್ಚ್ ನಲ್ಲಿ ವಿಶೇಷ ಪಾರ್ಥನೆಯೊಂದಿಗೆ
ಬೀಳ್ಕೊಡುಗೆ ಹಾಗೂ ನೂತನ ಧರ್ಮಗುರುಗಳಾಗಿ ವಂ.ಮೆಲ್ವೀನ್ ಜೋನ್ ಡಿ’ಸೋಜ ಅಧಿಕಾರ ಸ್ವೀಕಾರ
ಅರವರಿಗೆ ಸ್ವಾಗತ ಕಾರ್ಯಕ್ರಮ ಮೇ.29 ರಂದು ನಡೆಯಿತು.
















ಬಿಷಪ್ ರವರ ಪ್ರತಿನಿಧಿಯಾಗಿ ಪುತ್ತೂರು ವಲಯದ ಪ್ರಧಾನ ಧರ್ಮಗುರುಗಳಾದ ರೆ.ಪಾ.ಲಾರೆನ್ಸ್ ಮಸ್ಕರೇನಸ್ ನೂತನ ಧರ್ಮಗುರುಗಳಿಗೆ ಅಧಿಕಾರ ವಹಿಸಿಕೊಟ್ಟು ಶುಭ ಹಾರೈಸಿದರು.
ಬೆಳ್ತಂಗಡಿ ಚರ್ಚ್ ಪ್ರಧಾನ ಧರ್ಮಗುರುಗಳು ವಂ.ವಾಲ್ಟರ್ ಡಿ’ಮೆಲ್ಲೋ , ಬೆಳ್ಳಾರೆ ಚಾಪೆಲಿನ ಧರ್ಮಗುರುಗಳು ಹಾಗೂ ಪುತ್ತೂರು ಸಂತ ಫಿಲೋಮಿನ ಕಾಲೇಜಿನ ಪ್ರಾಂಶುಪಾಲ ವಂ. ಅಂಥನಿ ಪ್ರಕಾಶ್ ಮೊಂತೆರೋ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷೆ ಸೆಲಿನಾ ಡಿಸೋಜ, ಕಾರ್ಯದರ್ಶಿ ಓವಿನ್ ಪಿಂಟೋ ಬೆಳ್ಳಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಧರ್ಮಗುರುಗಳು ವಂ.ಅಮಿತ್ ಪ್ರಕಾಶ್ ರೋಡ್ರಿಗಸ್ ಸ್ವಾಗತಿಸಿದರು. ರೇಷ್ಮಾ ಡಿ’ಸೋಜ ಸುಬ್ರಹ್ಮಣ್ಯ ನಿರೂಪಿಸಿದರು.
ಓವಿನ್ ಪಿಂಟೋ ಬೆಳ್ಳಾರೆ ವಂದಿಸಿದರು. ಇತರ ಚರ್ಚ್ ಗಳ ಧರ್ಮಗುರುಗಳು, ಚರ್ಚ್ ಪಾಲನಾ ಮಂಡಳಿಯವರು, ಧರ್ಮ ಕೇಂದ್ರದ ಸಮಸ್ತ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.










