ಬಂಟ್ವಾಳದಲ್ಲಿ ನಡೆದ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕಲಾಭಿಮಾನಿಗಳ ಮನಸೂರೆಗೈದ ಸುಳ್ಯ ಬಂಟರ ಸಂಘದ ನೃತ್ಯ ತಂಡ

0

ಮೇ 25 ರಂದು ಬಂಟವಾಳದ ಬಂಟರ ಸಂಘದ ವಿಂಶತಿ ಸಂಭ್ರಮದ ಪ್ರಯುಕ್ತ ಜಿಲ್ಲಾ ಮಟ್ಟದ ಬಂಟರ ನೃತ್ಯ ಸ್ಪರ್ದಾ ಕಾರ್ಯಕ್ರಮದಲ್ಲಿ ಸುಳ್ಯ ಬಂಟರ ಸಂಘದ ನೃತ್ಯ ತಂಡವು ಭಾಗವಹಿಸಿ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಮನಮೆಚ್ಚುವ ಪ್ರದರ್ಶನ ನೀಡಿ ಕಲಾಭಿಮಾನಿಗಳ ಮನಸೂರೆಗೈದಿತು.
ಬೆಳ್ಳಾರೆ ಡ್ಯಾನ್ಸ್ ಆಂಡ್ ಬೀಟ್ಸ್ ನ ನೃತ್ಯ ನಿರ್ದೇಶಕ ಜೀವನ್ ಜಿ.ಎನ್.ಬೆಳ್ಳಾರೆಯವರು ನೃತ್ಯ ನಿರ್ದೇಶನ ನೀಡಿದ್ದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಎನ್.ಜಯಪ್ರಕಾಶ್ ರೈ, ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ ಬಂಟವಾಳದ ಬಂಟರ ಸಂಘದಿಂದ ಗೌರವ ಸ್ವೀಕರಿಸಿದರು. ತಂಡದ ನೇತೃತ್ವ ವಹಿಸಿದ್ದ ಸುಜಿತ್ ರೈ ಎಣ್ಮೂರು ಪಟ್ಟೆ, ಸ್ಪರ್ಧಾಳುಗಳು, ಪೋಷಕರು, ಡ್ಯಾನ್ಸ್ ಆಂಡ್ ಬೀಟ್ಸ್ ತಂಡದ ಸಹಕಲಾವಿದರು ಸಹಕರಿಸಿದರು