ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘ (ಲ್ಯಾಂಪ್ಸ್) ದ ಬಡ್ಡಡ್ಕ ಶಾಖೆಯಲ್ಲಿ ಪ್ರಭಾರ ಮಾರಾಟ ಗುಮಾಸ್ತರಾಗಿದ್ದ ಶಶಿಧರ ಬಿ.ಯವರು ನಾಳೆ (ಮೇ.31)ರಂದು ನಿವೃತ್ತಿ ಹೊಂದಲಿದ್ದಾರೆ.















ಆಲೆಟ್ಟಿ ಗ್ರಾಮದ ಬಡ್ಡಡ್ಕ ತಿಮ್ಮನಮೂಲೆ ದಿ.ವೆಂಕಪ್ಪ ನಾಯ್ಕ ಮತ್ತು ದಿ.ಲಕ್ಷ್ಮಿ ದಂಪತಿಗಳ ಪುತ್ರನಾಗಿ 1965 ಜೂನ್ 1 ರಂದು ತಿಮ್ಮನಮೂಲೆಯಲ್ಲಿ ಜನಿಸಿದ ಶಶಿಧರ ಬಿ.ಯವರು ಪ್ರಾಥಮಿಕ ಶಿಕ್ಷಣವನ್ನು ಆಲೆಟ್ಟಿ ಆಶ್ರಮ ಶಾಲೆಯಲ್ಲಿ ಮತ್ತು ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಪಡೆದಿದ್ದು, ಪ್ರೌಢ ಶಿಕ್ಷಣವನ್ನು ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಪಡೆದಿರುತ್ತಾರೆ. 1986 ರಲ್ಲಿ ಲ್ಯಾಂಪ್ಸ್ ಸಹಕಾರಿ ಸಂಘದ ಬಡ್ಡಡ್ಕ ಶಾಖೆಗೆ ಸಹಾಯಕ ಮಾರಾಟ ಗುಮಾಸ್ತರಾಗಿ ಕರ್ತವ್ಯಕ್ಕೆ ಸೇರಿದರು. ಸುಳ್ಯ, ಕಾಂತಮಂಗಲ, ಚೊಕ್ಕಾಡಿ ಹಾಗೂ ಬಡ್ಡಡ್ಕ ಶಾಖೆಯ ಪ್ರಭಾರ ಮಾರಾಟ ಗುಮಾಸ್ತರಾಗಿ ಸುದೀರ್ಘ 39ವರ್ಷ ಸೇವೆ ಸಲ್ಲಿಸಿರುತ್ತಾರೆ.
ಇವರ ಪತ್ನಿ ಶ್ರೀಮತಿ ಮೀನಾಕ್ಷಿ ಗೃಹಿಣಿಯಾಗಿದ್ದು, ಪುತ್ರಿ ಶ್ರೀಮತಿ ಅಕ್ಷತಾ ನವೀನ್ ಹರಿಹರಪಲ್ಲತಡ್ಕಸರಕಾರಿ ಪ್ರೌಢಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕರ್ತವ್ಯದಲ್ಲಿದ್ದಾರೆ.ಪುತ್ರ ರಂಜಿತ್ ಸಹಕಾರಿ ಸಂಘದಲ್ಲಿ ಕರ್ತವ್ಯದಲ್ಲಿದ್ದಾರೆ.










