ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಉಪಾಧ್ಯಕ್ಷ ಸ್ಥಾನಕ್ಕೆ ಸಲೀಂ ಪೆರಂಗೋಡಿ ರಾಜೀನಾಮೆ















ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಹದಗೆಡುತ್ತ ಬಂದಿದ್ದು. ಕೋಮು ದ್ವೇಷಕ್ಕೆ ಹಲವಾರು ಜನ ಹತ್ಯೆಗೀಡಾಗಿದ್ದು ಕಳೆದ ಎರಡು ದಿನಗಳ ಹಿಂದೆ ಅಮಾಯಕ ಬಂಟ್ವಾಳದ ಅಬ್ದುಲ್ ರಹ್ಮಾನ್ ಎಂಬವರನ್ನು ಹತ್ಯೆ ಮಾಡಲಾಯಿತು.
ದ.ಕ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಸರಣಿ ಕೋಮು ಹತ್ಯೆಗಳನ್ನು ಮಟ್ಚ ಹಾಕವುದು ಅದಕ್ಕೆ ಪ್ರೇರಣೆ ನೀಡುವ ದುಷ್ಟಶಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ವಿಫಲವಾದ ಪೋಲಿಸ್ ಇಲಾಖೆ ಮತ್ತು ಆಡಳಿತ ವ್ಯವಸ್ಥೆಯ ವಿರುದ್ದ ಬೇಸತ್ತು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಫಟಕ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುವುದಾಗಿಯೂ, ಅದರೊಂದಿಗೆ ಪಕ್ಷದ ಯಾವುದೇ ಚಟುವಟಿಕೆಗಳಿಗೆ ಭಾಗವಹಿಸುವುದ್ದಿಲ್ಲ ಎಂದು ಸಲೀಂ ಪೆರಂಗೊಡಿ ಯವರು ತಿಳಿಸಿದ್ದಾರೆ










