ಸುಳ್ಯದ ಶ್ರೀರಾಂಪೇಟೆ ಬಳಿ ಸ್ಕಿಡ್ ಆಗಿ ಬಸ್ಸಿನಡಿಗೆ ಬಿದ್ದ ಸ್ಕೂಟಿ

0

ಕಾಲಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಸುಳ್ಯದ ಶ್ರೀರಾಂಪೇಟೆ ಬಳಿ ಸ್ಕೂಟಿಯೊಂದು ನಿಯಂತ್ರಣ ತಪ್ಪಿ ಕೆ ಎಸ್ ಆರ್ ಟಿ ಸಿ ಬಸ್ಸಿನಡಿಗೆ ಬಿದ್ದು ಸವಾರನ ಕಾಲಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಮೇ 30 ರಂದು ರಾತ್ರಿ ಸಂಭವಿಸಿದೆ.

ಸ್ಕೂಟಿ ಸವಾರ ಬಸ್ ನಿಲ್ದಾಣ ಕಡೆಯಿಂದ ಕೆಳಗಿನ ಪೇಟೆ ಕಡೆಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ  ಬಸ್ ನ ಕೆಳ ಭಾಗಕ್ಕೆ ಬಿದ್ದಿದ್ದರು.

ಪರಿಣಾಮ ಸ್ಕೂಟಿ ಸವಾರನ ಕಾಲಿಗೆ ಗಾಯವಾಗಿದ್ದು ಸ್ಥಳೀಯರು ಸವಾರನನ್ನು ಸುಳ್ಯ ಕೆ ವಿ ಜಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸ್ಕೂಟಿ ಸವಾರ ಕಲ್ಲುಮುಟ್ಲು ನಿವಾಸಿಯಾಗಿದ್ದು, ಸುಳ್ಯದ ಹೋಟೆಲ್ ಒಂದರಲ್ಲಿ ಪಾರ್ಸಲ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.