ಸುಳ್ಯದ ಜ್ಯೋತಿ ಆಸ್ಪತ್ರೆ ಬಳಿ‌ ಸರಣಿ ಅಪಘಾತ: ವಾಹನಗಳು ಜಖಂ

0

ಸುಳ್ಯ ಜ್ಯೋತಿ ವೃತ್ತದ ಬಳಿ ಎರಡು ಕಾರು ಹಾಗೂ ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ವಾಹನಗಳು ಜಖಂ ಗೊಂಡ ಘಟನೆ ಇದೀಗ ಸಂಭವಿಸಿದೆ.

ಸುಳ್ಯ ಪೇಟೆ ಕಡೆ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಪೈಚಾರ್ ಕಡೆ ಬರುತ್ತಿದ್ದ ಆಲ್ಟೋ ಕಾರೊಂದು ಡಿಕ್ಕಿ ಹೊಡೆದಿದೆ.ಈ ವೇಳೆ ಹೊಡೆತದ ರಭಸದಿಂದ ಆಟೋ ರಿಕ್ಷಾದ ಚಕ್ರದ ಭಾಗಕ್ಕೆ ತಾಗಿದ್ದು ನಿಯಂತ್ರಣ ತಪ್ಪಿದ ಆಟೋ ರಸ್ತೆ ಬದಿ ನಿಲ್ಲಿಸಿದ್ದ ಇನ್ನೋವಾ ಕಾರಿಗೆ ಡಿಕ್ಕಿಯಾಗಿದೆ.

ಘಟನೆಯಿಂದ ವಾಹನ ಗಳು ಜಖಂ ಗೊಂಡಿದ್ದು ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.