ಕಂಪೌಂಡ್ ಕುಸಿದು ಎರಡು ವಿದ್ಯುತ್ ಕಂಬಗಳು ಧರಾಶಾಯಿ
ಸುಳ್ಯದಲ್ಲಿ ಇಂದು ಸಂಜೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಅಲ್ಲಲ್ಲಿ ತಡೆಗೋಡೆ ಕುಸಿತ, ವಿದ್ಯುತ್ ಕಂಬ ಮುರಿತ ಘಟನೆಗಳು ನಡೆದು ಹಾನಿ ಉಂಟಾಗಿದೆ.















ಸುಳ್ಯದ ಯುವಜನ ಸಂಯುಕ್ತ ಮಂಡಳಿ ಬಳಿ ಕಂಪೌಂಡ್ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿಗಾಗಿ ಅಗೆದಿದ್ದ ಪರಿಣಾಮವಾಗಿ ಮಳೆಗೆ ಕಂಪೌಂಡ್ ಕುಸಿತಗೊಂಡು ಎರಡು ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ನಡೆದಿದ್ದು, ನಾವೂರು ಮೊಹಿದ್ದೀನ್ ಎಂಬವರ ಮನೆಯ ಕಂಪೌಂಡ್ ಬಿದ್ದಿ ರುವುದಾಗಿ ತಿಳಿದು ಬಂದಿದೆ.
ಮತ್ತೊಂದು ಘಟನೆಯಲ್ಲಿ ನಾವೂರು ಬಳಿ ಮನೆಯೊಂದರ ಹಿಂಭಾಗದ ಮಾಡು ಮುರಿದು ಬಿದ್ದು ಮಳೆ ನೀರು ಮನೆಯೊಳಗೆ ಬಂದಿರುವ ಬಗ್ಗೆ ವರದಿಯಾಗಿದೆ.
ಸುಳ್ಯ ಜೂನಿಯರ್ ಕಾಲೇಜ್ ಬಳಿ ವಿದ್ಯುತ್ ಕಂಬ ಬಿದ್ದಲ್ಲಿ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ.










