ದುಗ್ಗಲಡ್ಕದ ರಸ್ತೆ ಬದಿಯ ಅಪಾಯಕಾರಿ ಮರ ತೆರವು
ದುಗ್ಗಲಡ್ಕ ಸಮೀಪದ ಕೊಯಿಕುಳಿ ತಿರುವಿನಲ್ಲಿ ಬರೆಯ ಮೇಲಿದ್ದ ಮರಗಳು ತೀವ್ರ ಮಳೆಯಿಂದಾಗಿ ಬುಡದ ಮಣ್ಣು ಜರಿದು ಸುಳ್ಯ- ಸುಬ್ರಹ್ಮಣ್ಯ ಹೆದ್ದಾರಿಗೆ ಬೀಳುವ ಸಂಭವವಿದ್ದು, ಇದರಿಂದಾಗಿ ಭಾರೀ ಅಪಾಯ ಸಂಭವಿಸುವ ಬಗ್ಗೆ ಸುದ್ದಿ ವೆಬ್ ಸೈಟ್ ನಲ್ಲಿ ಇಂದು ಬೆಳಿಗ್ಗೆ ಚಿತ್ರ ಸಹಿತ ವರದಿ ಮಾಡಲಾಗಿತ್ತು.















ಈ ಮರ ರಸ್ತೆಗೆ ಬಿದ್ದಲ್ಲಿ ರಸ್ತೆ ಬ್ಲಾಕ್ ಆಗುವ , ಪ್ರಯಾಣಿಕರಿಗೂ ಪ್ರಾಣಾಪಾಯವಾಗುವ ಸಂಭವ ಇತ್ತು.ಅದಲ್ಲದೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕೆಳಗಡೆಯೇ ಇರುವುದರಿಂದ ವಿದ್ಯುತ್ ಸಂಚಾರವೂ ಅಸ್ತವ್ಯಸ್ತವಾಗುವ ಸಂಭವವಿತ್ತು.
ಇದನ್ನು ಅರಿತ ಅರಣ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತರಾಗಿ ಮರ ತೆರವು ಕಾರ್ಯವನ್ನು ಮಾಡಿದೆ. ಅವರಿಗೆ ಸ್ಥಳೀಯ ಯುವಕರು ಸಹಕಾರ ನೀಡಿದ್ದಾರೆ.










