















ಸುಳ್ಯದ ಕೆ.ವಿ.ಜಿ. ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮವನ್ನು ಮೇ ೩೧ ರಂದು ಆಚರಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ‘ಬಿ’ ಕಾರ್ಯನಿರ್ವಾಹಕ ನಿರ್ದೇಶಕ ಮೌರ್ಯ ಆರ್ ಕುರುಂಜಿ ಸಮಾರಂಭವನ್ನು ಉದ್ಘಾಟಿಸಿ, ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ರೋಗಿಗಳು ವ್ಯಸನವನ್ನು ಬಿಡಲು ಚಾತುರ್ಯದಿಂದ ಸಲಹೆ ನೀಡುವುದು ಆರೋಗ್ಯ ರಕ್ಷಣಾ ಪೂರೈಕೆದಾರರ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಪ್ರಾಂಶುಪಾಲ ಡಾ. ಮೋಕ್ಷಾ ನಾಯಕ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಾರ್ವಜನಿಕ ಆರೋಗ್ಯ ದಂತ ವಿಭಾಗದ ಮುಖ್ಯಸ್ಥ ಡಾ. ನುಸ್ರತ್ ಫರೀದ್ ಮತ್ತು ಇತರ ವಿಭಾಗದ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

ನಂತರ ನಡೆದ ನಿರಂತರ ದಂತ ಶಿಕ್ಷಣ ಕಾರ್ಯಕ್ರಮದಲ್ಲಿ ಮೈಸೂರು ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ. ಮನೋಹರ್ ಭಟ್ ತಂಬಾಕು ವ್ಯಸನ ಹಾಗು ತಂಬಾಕು ಉತ್ಪನ್ನಗಳ ಮಾರಾಟ ಹೆಚ್ಚಿಸುವಲ್ಲಿ ತಂಬಾಕು ಕಂಪೆನಿಗಳ ಚತುರ ನಡೆ ಎಂಬ ವಿಚಾರದ ಬಗ್ಗೆ ಉಪನ್ಯಾಸ ನೀಡಿದರು.
ಬಾಯಿಯ ವೈದ್ಯಕೀಯ ಶಾಸ್ತ್ರ ಮುಖ್ಯಸ್ಥ ಡಾ. ಜಯಪ್ರಸಾದ್ ಆನೆಕಾರ್ ಸ್ವಾಗತಿಸಿದರು ಮತ್ತು ಡಾ. ಜಯಲಕ್ಷ್ಮಿ ಪ್ರಕಾಶ್ ಧನ್ಯವಾದ ಅರ್ಪಿಸಿದರು.










