ಚೊಕ್ಕಾಡಿ : ಕರ್ಮಜೆಯಲ್ಲಿ ಕಾಂಪೌಂಡು ಗೋಡೆ ಕುಸಿತ – ಅಪಾರ ನಷ್ಟ

0

ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಶ್ರೀಧರ ಕರ್ಮಜೆ ನೇಣಾರು ಎಂಬವರ ಅಂಗಳದ ಸಮೀಪದ ತಡೆಗೋಡೆ ಮೇ.31 ರಂದು ಸುರಿದ ಭಾರೀ ಮಳೆಗೆ ಕುಸಿದು ಬಿದ್ದಿದ್ದು ಅಪಾರ ನಷ್ಟ ಸಂಭವಿಸಿದೆ.
ಕಾಂಪೌಂಡ್ 70 ಮೀಟರ್ ಉದ್ದ, 20 ಫೀಟ್ ಎತ್ತರವಿದ್ದು ಅದರಲ್ಲಿ 40 ಮೀಟರ್ ಸಂಪೂರ್ಣ ಕುಸಿದು ಬಿದ್ದಿದೆ.
ಉಳಿದ 30 ಮೀಟರ್ ಉದ್ದ ಕಾಂಪೌಂಡ್ ಕೂಡ ಬಿರುಕು ಬಿಟ್ಟಿದ್ದು ಕುಸಿದು ಬೀಳುವ ಸಂಭವವಿದೆ ಎಂದು ತಿಳಿದು ಬಂದಿದೆ.
ಸುಮಾರು 6 ಲಕ್ಷ ನಷ್ಟ ಸಂಭವಿಸಿರುವುದಾಗಿ ತಿಳಿದು ಬಂದಿದೆ.