
ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಶ್ವಾಸಕೋಶ ವಿಭಾಗ ಮತ್ತು ಎನ್. ಎಸ್. ಎಸ್ ಘಟಕದ ವತಿಯಿಂದ ಮೇ.೩೧ ರಂದು ವಿಶ್ವ ತಂಬಾಕು ಮುಕ್ತ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಒ.ಎಲ್.ಇ. ಅಧ್ಯಕ್ಷ ಡಾ. ಕೆ.ವಿ ಚಿದಾನಂದ ವಹಿಸಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ರೆಸ್ಪಿರೇಟರಿ ವಿಭಾಗದ ಶ್ವಾಸ ಕೋಶ ತಜ್ಞರಾದ ಡಾ. ಪ್ರೀತಿರಾಜ್ ಬಲ್ಲಾಳ್ ವಿಶ್ವ ತಂಬಾಕು ರಹಿತ ದಿನದ ಕುರಿತಾದ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಕಾಲೇಜಿನ ಡೀನ್ ಡಾ. ನೀಲಾಂಬಿಕೈ ನಟರಾಜನ್, ಕೆವಿಜಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸಸ್ ಪ್ರಾಂಶುಪಾಲೆ ಬಿ.ಎಮ್ ಪ್ರೇಮ, ಕಮ್ಯೂನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ದಿನೇಶ್ ಪಿ.ವಿ, ಡಾ. ಲಿವೀಸ್, ಜಿಮ್ಸಿ ಜಾನ್ ಉಪಸ್ಥಿತರಿದ್ದರು.
















ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಿರುಪ್ರಹಸನ, ವಿವಿಧ ಸ್ಪರ್ಧೆಗಳು ನಡೆಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಅನನ್ಯ ವಸುದೇವ ಸ್ವರಚಿತ ಕವನ ವಾಚಿಸಿದರು. ರೆಸ್ಪಿರೇಟರಿ ವಿಭಾಗದ ಸಹಾಯಕ ಪ್ರದ್ಯಾಪಕರಾದ ಡಾ. ಅನಿರುದ್ಧ ಕೆ ಕಾರ್ಯಕ್ರಮ ನಿರೂಪಿಸಿದರು.










