ದುಗ್ಗಲಡ್ಕದಲ್ಲಿ ಶಿವಾಜಿ ಫ್ರೆಂಡ್ಸ್ ವತಿಯಿಂದ ಹಗ್ಗ ಜಗ್ಗಾಟ ಪಂದ್ಯಾಕೂಟ

0

ಶಿವಾಜಿ ಫ್ರೆಂಡ್ಸ್ ದುಗ್ಗಲಡ್ಕ ಇದರ ಆಶ್ರಯದಲ್ಲಿ 10 ತಂಡಗಳ ಲೀಗ್ ಮಾದರಿಯ ಹಗ್ಗಜಗ್ಗಾಟ ಪಂದ್ಯ ಮೇ.31 ರಂದು ದುಗ್ಗಲಡ್ಕದಲ್ಲಿ ನಡೆಯಿತು.
ಪಂದ್ಯಾಟವನ್ನು ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಎ.ನೀರಬಿದಿರೆ ಉದ್ಘಾಟಿಸಿದರು. ಉಬರಡ್ಕ ಮಿತ್ತೂರು ಗ್ರಾ‌.ಪಂ.ಸದಸ್ಯ ಹರೀಶ್ ರೈ ಉಬರಡ್ಕ, ನ.ಪಂ.ಸದಸ್ಯ ಬಾಲಕೃಷ್ಣ ರೈ ದುಗ್ಗಲಡ್ಕ, ನ.ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ, ಹಸೈನಾರ್ ಕೊಳಂಜಿಕೋಡಿ, ಕಾರ್ತಿಕ್ ಸೂರ್ಯಮನೆ ಅತಿಥಿಗಳಾಗಿದ್ದರು. ಗಿರೀಶ್ ಕುಂಟಿನಿ ನಿರೂಪಿಸಿದರು. ಬಳಿಕ ಪಂದ್ಯಾಕೂಟ ನಡೆಯಿತು.