ಆಡಿಂಜದಲ್ಲಿ ಅಶಕ್ತ ಬಡ ಮಹಿಳೆಯ ಶಿಥಿಲಗೊಂಡ ಮನೆಯ ದುರಸ್ತಿ

0

ಆಲೆಟ್ಟಿ ಮಹಮ್ಮಾಯಿ ಮರಾಟಿ ವೇದಿಕೆಯ ಯುವಕರಿಂದ ಸೇವಾ ಕಾರ್ಯ

ಆಲೆಟ್ಟಿ ಗ್ರಾಮದ ಆಡಿಂಜ ಎಂಬಲ್ಲಿ ವಾಸಿಸುತ್ತಿದ್ದ ಶ್ರೀಮತಿ ಸುಶೀಲಾ ಸುಂದರ ನಾಯ್ಕ್ ಎಂಬ ಅಶಕ್ತ ಬಡ ಮಹಿಳೆಯ ಮನೆಯು ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಗಮನಹರಿಸಿದ ಮಹಮ್ಮಾಯಿ ಮರಾಟಿ ಯುವ ವೇದಿಕೆಯ ಯುವಕರು ಶ್ರಮದಾನದ ಮೂಲಕ ಮನೆಯ ದುರಸ್ತಿ ಕಾರ್ಯ ಕೈಗೆತ್ತಿಕೊಂಡರು.

ಮರಾಟಿ ಯುವ ವೇದಿಕೆಯ ವತಿಯಿಂದ ಗ್ರಾಮದಲ್ಲಿ ಪ.ಪಂಗಡಕ್ಕೆ ಸೇರಿದ ಮನೆಯ ಸರ್ವೆ ನಡೆಸುತ್ತಿರುವ ಸಂದರ್ಭದಲ್ಲಿ ಸುಶೀಲಾ ರವರ ಮನೆಯ ಸ್ಥಿತಿಯನ್ನು ಅರಿತು ಸ್ಥಳೀಯ ಪಂಚಾಯತ್ ಸದಸ್ಯರಾದ ಸತ್ಯ ಕುಮಾರ್ ಆಡಿಂಜ ರವರ ಗಮನಕ್ಕೆ ತಂದರು. ದುರಸ್ತಿ ಕಾರ್ಯಕ್ಕೆ ಬೇಕಾದ ಅನುದಾನ ಒದಗಿಸಿಕೊಡುವಂತೆ ಪಂಚಾಯತಿಗೆ ಯುವಕರು ಮನವಿ ಸಲ್ಲಿಸಿದರು.
ಬಳಿಕ ಪಂಚಾಯತ್ ನವರ ಸಹಕಾರದೊಂದಿಗೆ ಮರಾಟಿ ಯುವ ವೇದಿಕೆಯ ಸದಸ್ಯರು ಮಳೆಯನ್ನು ಲೆಕ್ಕಿಸದೆ ಶ್ರಮದಾನದ ಮೂಲಕ ಮನೆಯ ದುರಸ್ತಿ ಕಾರ್ಯವನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಕೊಟ್ಟರು. ಯುವಕರ ಈ ಸೇವಾ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಯಿತು.