ಚೊಕ್ಜಾಡಿ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಸಾಧಕ ವಿದ್ಯಾರ್ಥಿಗಳಿಗೆ , ನೂರು ಫಲಿತಾಂಶ ಪಡೆದ ಶಾಲೆಗಳಿಗೆ ಗೌರವಾರ್ಪಣೆ

0

ದ.ಕ ಜಿಲ್ಲಾ ಪಂಚಾಯತ್ ,ಶಾಲಾ ಶಿಕ್ಷಣ ಇಲಾಖೆ,‌ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ ಇದರ ಸಹಯೋಗದಲ್ಲಿ 2024-25 ನೇ ಸಾಲಿನ ಎಸ್.ಎಸ್‌. ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಶೇ.100% ಫಲಿತಾಂಶ ದಾಖಲಿಸಿದ ತಾಲೂಕಿನ ಶಾಲೆಗಳಿಗೆ ಹಾಗೂ ಅತ್ಯುತ್ತಮ ಅಂಕ ಗಳಿಸಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವು ಮೇ.28 ರಂದು ಚೊಕ್ಕಾಡಿ ಸತ್ಯಸಾಯಿ ವಿದ್ಯಾ ಕೇಂದ್ರದಲ್ಲಿ ನಡೆಯಿತು.

ಚೊಕ್ಕಾಡಿ ಸತ್ಯಸಾಯಿ ವಿದ್ಯಾಕೇಂದ್ರದ ನಿಕಟ ಪೂರ್ವ ಅಧ್ಯಕ್ಷ ನಾರಾಯಣ ಕೋಟೆ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆ -1 ರಲ್ಲಿ ಶೇ.100% ಫಲಿತಾಂಶ ಗಳಿಸಿದ ಶಾಲೆಯ ಮುಖ್ಯಸ್ಥರನ್ನು ಇಲಾಖೆ ವತಿಯಿಂದ ಫಲಕ ನೀಡಿ ಗೌರವಿಸಲಾಯಿತು. ಅತ್ಯುತ್ತಮ ಸಾಧನೆ ಮಾಡಿದವಿದ್ಯಾರ್ಥಿಗಳನ್ನು ಇಲಾಖೆಯ ವತಿಯಿಂದ ಅಭಿನಂದಿಸಲಾಯಿತು.

620 ಕ್ಕಿಂತ ಹೆಚ್ಚು ಅಂಕ ಗಳಿಸಿದ 8 ಮಂದಿ ವಿದ್ಯಾರ್ಥಿಗಳಿಗೆ ಡೈರಿ‌ ರಿಚ್ ಐಸ್ ಕ್ರೀಮ್ ಸಂಸ್ಥೆಯ ಮಾಲಕರಾದ ಗಿರಿಯಪ್ಪ ಗೌಡ ಕಾಪಿಲ ರವರು ತಲಾ ರೂ.10 ಸಾವಿರ ಮೊತ್ತದ ಚೆಕ್ ನೀಡಿ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಸಮನ್ವಯ ಅಧಿಕಾರಿ ಶ್ರೀಮತಿ ಶೀತಲ್, ಅಕ್ಷರ ದಾಸೋಹ ನಿರ್ದೇಶಕಿ ಶ್ರೀಮತಿ ವೀಣಾ ಎಂ.ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಪ್ರಜ್ಞಾಕುಮಾರಿ,ಸೌಮ್ಯ, ಜಯಶ್ರೀ ಪ್ರಾರ್ಥಿಸಿದರು. ತಾ.ದೈ.ಶಿ.ಪರಿವೀಕ್ಷಣಾಧಿಕಾರಿ ಶ್ರೀಮತಿ ಆಶಾ ನಾಯಕ್ ಅಭಿನಂದನಾ ಪಟ್ಟಿ ವಾಚಿಸಿದರು. ಮುಖ್ಯ ಶಿಕ್ಷಕ ಬಿ.ಗುಣಶೇಖರ ಭಟ್ ಸ್ವಾಗತಿಸಿ, ವಂದಿಸಿದರು. ಆಗಮಿಸಿದ ಎಲ್ಲರಿಗೂ ಉಪಹಾರ ಹಾಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು