ಚೆಂಬು:ವುಮೆನ್ಸ್ ಆಫ್ ವರ್ಥ್ ಕಾರ್ಯಕ್ರಮಕ್ಕೆ ಚೆಂಬು ಗ್ರಾಮದ ರೇಖಾ ಹೆಚ್. ಎ.ಆಯ್ಕೆ:

0

ಜೂ.4ರಂದು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಡೆಯಲಿರುವ “ವ್ಯುಮೆನ್ಸ್ ಆಫ್ ಅರ್ಥ್” ಕಾರ್ಯಕ್ರಮಕ್ಕೆ ಚೆಂಬು ಗ್ರಾಮದ ರೇಖಾ ಅರುಣೋದಯಕುಮಾರ್ ಹಾರಂಬಿ ಇವರು ಆಯ್ಕೆಯಾಗಿದ್ದಾರೆ.ಇವರು ಕೊಡಗು ಜಿಲ್ಲೆಯ ಎಲ್ಲಾ ಸ್ವ ಸಹಾಯ ಸಂಘಗಳ ಸಂಜೀವಿನಿ ಒಕ್ಕೂಟದ ಪ್ರತಿನಿಧಿಯಾಗಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.ಇವರು ಚೆಂಬು ಗ್ರಾಮದ ವಂದನಾ ಸ್ವ ಸಹಾಯ ಸಂಘದ ಸದಸ್ಯರಾಗಿದ್ದು, ಚೆಂಬು ಗ್ರಾಮದ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾಗಿದ್ದಾರೆ.