ಪುತ್ತೂರಿನಲ್ಲಿ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ಮಹಾಧಿವೇಶನ

0

ಪುತ್ತೂರಿನಲ್ಲಿ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ಮಹಾಧಿವೇಶನ ಸಕ್ರಿಯವಾದ ಜಿಲ್ಲಾ ಸಂಘ ನಮಗೆ ಬೇಕಿತ್ತು. ಸೌಹಾರ್ದತೆಗೆ ಬದ್ಧ-ಸಮರಕ್ಕೆ ಸಿದ್ಧವಾಗಿರೋಣ: ಡಾ| ರೇಣುಕಾಪ್ರಸಾದ್

ಕೆ.ವಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಕ್ರಿಯವಾದ ಜಿಲ್ಲಾ ಗೌಡ ಸಂಘ ನಮಗೆ ಬೇಕಿತ್ತು. ಅದು ಇವತ್ತು ಕುರುಂಜಿ ವೆಂಕಟ್ರಮಣ ಗೌಡರ ಹೆಸರಿನ ಈ ವೇದಿಕೆಯಲ್ಲಿ ಸಮಾವೇಶಗೊಂಡಿರುವುದರಿಂದ ಇದಕ್ಕೆ ಶಕ್ತಿ ಬಂದಿದೆ. ನಾವು ಕೆದಂಬಾಡಿ ರಾಮ ಗೌಡ, ಕೆಂಪೇ ಗೌಡರ ಆದರ್ಶ ಪಾಲಿಸಬೇಕು. ಸೌಹಾರ್ದತೆಗೆ ಬದ್ಧರಾಗಿರಬೇಕು – ಸಮರಕ್ಕೂ ಸಿದ್ಧರಾಗಿರಬೇಕು” ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ| ಕೆ.ವಿ. ರೇಣುಕಾಪ್ರಸಾದ್ ಕರೆ ನೀಡಿದರು.


ಅವರು ಪುತ್ತೂರಿನ ತೆಂಕಿಲದಲ್ಲಿರುವ ಒಕ್ಕಲಿಗರ ಗೌಡ ಸಮುದಾಯ ಭವನದಲ್ಲಿ ಜೂ. ೧ರಂದು ಆಯೋಜಿತವಾದ ಗೌಡರ ಯಾನೆ ಒಕ್ಕಲಿಗರ ಜಿಲ್ಳಾ ಮಾತೃ ಮಾತೃ ಸಂಘದ ಸರ್ವ ಸದಸ್ಯರುಗಳ ಪ್ರಥಮ ಮಹಾ ಅಧಿವೇಶನ ಮತ್ತು ನೂತನ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ಇದು ಮೂಲ, ಇದು ತಾಯಿ ಇದ್ದಂತೆ, ಅಪ್ಪೆ ಜೋಕುಲು. ನಾವೆಲ್ಲ ಹಿಂದು ನಾವೆಲ್ಲ ಒಂದು, ನಾವೆಲ್ಲ ಬಂಧು. ಎಲ್ಲೂ ಸಂದು ಇರಬಾರದು. ಎಂದು ಸಮಾಜ ಬಾಂಧವರಿಗೆ ಕಿವಿ ಮಾತು ಹೇಳಿದ ಅವರು ನಮ್ಮಲ್ಲಿ ಪ್ರೋತ್ಸಾಹದ ಮನೋಭಾವನೆ ಇರಬೇಕು. ಕಾಲುಎಳೆಯುವ ಮನೋಭಾವನೆ ಬಿಟ್ಟುಬಿಡಬೇಕು. ನಮ್ಮ ಸಮಾಜಬಾಂಧವ ಮುಂದೆ ಬರುವಾಗ ಎಲ್ಲರು ಸಹಕರಿಸಬೇಕು. ನನ್ನಿಂದ ಏನಾಗಬೇಕೆಂದು ಹೇಳಿ ಪೂರ್ಣ ಸಹಕಾರ ಕೊಡುತ್ತೇನೆ ಎಂದರು.


ಸಮಾಜದ ಒಳಿತಿಗಾಗಿ ಕುಕ್ಕೆಗೆ ಬೆಳ್ಳಿರಥ :
ನಾನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬೆಳ್ಳಿರಥ ಕೊಡುವುದು ನನಗೆ ಒಳ್ಳೆದಾಗಲಿ ಎಂದಲ್ಲ. ಸಮಾಜದ ಒಳಿತಿಗಾಗಿ. ಹಾಗಾಗಿ ಮುಂದೆ ಬೆಳ್ಳಿರಥ ಕೊಡುಗೆಗೆ ವೀಳ್ಯಕೊಡುವಾಗ ಮತ್ತು ಬೆಳ್ಳಿ ರಥ ಸಮರ್ಪಣೆ ಕಾರ್ಯಕ್ರಮಕ್ಕೆ ಎಲ್ಲರು ಭಾಗವಹಿಸುವಂತೆ ರೇಣುಕಾಪ್ರಸಾದ್‌ ವಿನಂತಿಸಿದರು.
ಸಮಾಜದಲ್ಲಿ ಮುಂದೆ ಬರಲು ಹಿಂಜರಿಕೆ ಬಿಟ್ಟು ಬಿಡಿ: ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಅವರು ಮಾತನಾಡಿ ಇವತ್ತು ನಾವು ಮಾತೃ ಸಂಘದ ಅಡಿಯಲ್ಲಿ ಒಟ್ಟಾಗಿzವೆ. ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕವಾಗಿ ನಮ್ಮ ಸಮಾಜ ಯಾಕೆ ಇನ್ನೂ ಮುಂದು ಬಂದಿಲ್ಲ ಎಂದು ಚಿಂತನೆ ಮಾಡಿಕೊಂಡಾಗ ನಮ್ಮಲ್ಲಿನ ಹಿಂಜರಿಕೆಯನ್ನು ಕಂಡುಕೊಂಡಿzನೆ. ಹಾಗಾಗಿ ನಾವು ಸಮಾಜದಲ್ಲಿ ಮುಂದೆ ಬರಲು ನಾವು ಹಿಂಜರಿಕೆಯನ್ನು ಬಿಟ್ಟು ಬಿಡಬೇಕು. ಯಾರ ಬಗ್ಗೆಯೂ ತಾತ್ಸಾರವಾಗಿ ಪದಬಳಕೆ ಮಾಡುವುದು ಒಳ್ಳೆಯದಲ್ಲ ಎಂಬುದು ನನ್ನ ಭಾವನೆ. ತಿರಸ್ಕರಿಸಿದವರನ್ನು ತಿರುಗಿ ನೋಡುವ ಬದಲು ನಿಮ್ಮನ್ನು ತಿರುಗಿ ನೋಡುವಂತೆ ಮಾಡಿ” ಎಂದರು. ಸಮಾಜವನ್ನು ಒಟ್ಟು ಮಾಡುವುದು ಮಠಾಧೀಶರ ಕರ್ತವ್ಯ. ಆದರೆ ನಮ್ಮ ಜಿಲ್ಲೆಯಲ್ಲಿ ಹೀಗೆ ಯಾಕಾಯಿತು ಗೊತ್ತಿಲ್ಲ. ಸಮಾಜ ಇಬ್ಬಾಗ ಆಗುವ ಪರಿಸ್ಥಿತಿ ನಿರ್ಮಾಣ ಆಗಿರುವುದು ಖೇದಕರ ವಿಚಾರ. ಅವತ್ತು ನಮ್ಮನ್ನು ಕರೆದು ಮಾತುಕತೆ ಮಾಡಿ ಎಲ್ಲರನ್ನು ಎದುರು ನಿಲ್ಲಿಸಿ ಪೊಟೋ ಕ್ಲಿಕ್ಕಿಸಿ ಪತ್ರಿಕೆಯಲ್ಲಿ ಹಾಕಿಸಿದರು. ಆಗ ಇದ್ದ ಅವೇಶ ಅಲ್ಲಿಗೆ ತಗ್ಗಿಹೋಗಿದೆ. ಸಮಯ ಕಳೆದ ಹಾಗೆ ಬದಲಾವಣೆ ಆಗುತ್ತದೆ. ಅದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.


ನಮ್ಮ ಸಂಘ ದ್ವೇಷ ಸಾಧನೆಗಲ್ಲ:
ಸಂಘದ ಉಪಾಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಅವರು ಮಾತನಾಡಿ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನಮ್ಮ ಹಿರಿಯರು ನಮಗೆ ಗೊತ್ತಿಲ್ಲದೆ ಸಂಘ ಕಟ್ಟಿದ್ದರು. ಆದರೆ ಬೆಳವಣಿಗೆಯಲ್ಲಿ ನಮಗೆ ಗೊತ್ತಿಲ್ಲದೆ ಇನ್ನೊಂದು ಸಂಘ ಹುಟ್ಟಿದೆ. ಹಾಗಾಗಿ ನಾವೆಲ್ಲ ಮೊದಲಿನ ಸಂಘವನ್ನೇ ಏರಬೇಕಾಯಿತು. ದ ಕ ಜಿಲ್ಲೆಯಲ್ಲಿ ಸಂಘ ಬಹಳ ಉತ್ತಮವಾಗಿ ಬೆಳೆಯಬೇಕು ಕಡು ಬಡವರನ್ನು ಗುರುತಿಸಿ ಅವರಲ್ಲಿ ಉತ್ತಮ ವಿದ್ಯಾರ್ಥಿಗಳಿಗೆ ಮಾತೃ ಸಂಘದಿಂದ ಸಹಾಯ ಮಾಡುವ ಕಾರ್ಯಕ್ರಮ ಆಗಬೇಕು. ನಮ್ಮ ಸಮಾಜದ ಅದೆಷ್ಟೋ ಮಂದಿ ಮಂಗಳೂರಿಗೆ ಉನ್ನತ ಶಿಕ್ಷಣ ಪಡೆಯಲು ಹೋದಾಗ ಅಲ್ಲಿ ಅವರಿಗೆ ಸರಿಯಾದ ವಸತಿ ವ್ಯವಸ್ಥೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಮಾತೃ ಸಂಘದ ಮೂಲಕ ವಸತಿ ಕಟ್ಟಡ ಕಟ್ಟಲು ರಾಜ್ಯದಿಂದ ಸಹಕಾರ ನೀಡುವಂತೆ ರಾಜ್ಯ ಉಪಾಧ್ಯಕ್ಷರನ್ನು ಮನವಿ ಮಾಡಿದರು. ನಮ್ಮ ಮಾತೃ ಸಂಘ ನಮ್ಮ ಸಮಾಜವನ್ನು ಉದ್ದಾರ ಮಾಡಲು ಹೊರತು ದ್ಚೇಷ ಸಾಧನೆಗಲ್ಲ ಎಂದವರು ಹೇಳಿದರು.


ಹಾಲಿಗೆ ಹುಳಿ ಹಿಂಡುವವರು ಬೇಡ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಲೋಕಯ್ಯ ಗೌಡ ಅವರು ಮಾತನಾಡಿ ಸಂಘದ ಸದಸ್ಯತ್ವ ಮಾಡಿದ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.


ನಾಡಪ್ರಭು ಬೆಂಗಳೂರನ್ನು ನಿರ್ಮಾಣ ಮಾಡಿದ ಕೆಂಪೇಗೌಡ, ಸ್ವಾತಂತ್ರ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ, ಶಿಕ್ಷಣ ಕ್ಷೇತ್ರದಲ್ಲಿ ಹೋರಾಟ ಮಾಡಿದ ಕುರುಂಜಿ ವೆಂಕಟರಮಣ ಗೌಡರನ್ನು ನಾವು ನೆನಪು ಮಾಡಿಕೊಂಡು ಕಾರ್ಯಕ್ರಮ ಆರಂಭಿಸಿzವೆ. ಜಿಲ್ಲಾ ಸಂಘದ ಕುರಿತು ಜನರಲ್ಲಿ ಗೊಂದಲ ವಾತಾವರಣ ಇತ್ತು. ಯಾಕೆಂದರೆ ನ.೯ ಕ್ಕೆ ಸುಳ್ಯದಲ್ಲಿ ಬೃಹತ್ ಸಭೆ ಮಾಡುವ ನಿರ್ಣಯ ಮಾಡಿದ್ದೆವು. ಆಗ ನಮ್ಮ ಎರಡು ತಂಡದೊಳಗೆ ರಾಜಿಪಂಚಾತಿಕೆ ಮಾಡಿದಂತೆ ಮಾಡಿದರು. ಆದರೆ ಅಲ್ಲಿ ಏಕಪಕ್ಷೀಯವಾದ ನಿರ್ಣಯ ಕೈಗೊಳ್ಳಲಾಯಿತು. ಅದರಲ್ಲಿ ಮುಂದುವರಿದ ಸಭೆಯಲ್ಲಿ ೧೦೩ ಜನ ಸದಸ್ಯರನ್ನು ಸೇರಿಸಬಾರದು ಎಂದೂ ಕೇವಲ ೨೩ ಮಂದಿ ಮಾತ್ರ ಸೇರಿಸಬೇಕೆಂದೂ ಅವರ ಸೂಚನೆಯನ್ನು ಕೇಳಿದಾಗ ನಾವು ಸಮಾಜಕ್ಕಾಗಿ ದುಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದೆವು. ಜೊತೆಗೆ ಇದು ನಾವು ಹೇಳಿದಂತೆ ಇಲ್ಲ ಎಂದುಕೊಂಡು ಆರಂಭದ ಸಮಾವೇಶವನ್ನು ಮುಂದೂಡಿದೆವು. ಇದು ಜನರಲ್ಲಿ ಗೊಂದಲವಾಯಿತು. ಹಾಗಾಗಿ ನಾವು ಮಾತೃ ಸಂಘವನ್ನು ಹುಟ್ಟು ಹಾಕಿzವೆ. ಮತ್ತೆ ನಾವು ಸದಸ್ಯತ್ವ ಆರಂಭಿಸಿ ಸುಮಾರು ೨ ಸಾವಿರ ಮಂದಿ ಸದಸ್ಯರನ್ನು ಮಾಡಿದೇವೆ. ಮುಂದೆ ೧೫ ತಿಂಗಳಲ್ಲಿ ೧೦ಸಾವಿರ ಸದಸ್ಯತ್ವದ ಗುರಿ ಹೊಂದಿzವೆ ಇದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಬೇಕು ಎಂದು ಲೋಕಯ್ಯ ಗೌಡರು ಹೇಳಿದರು. ಈಗ ನಮ್ಮ ಎಲ್ಲಾ ಸದಸ್ಯರು ಹಾಲು, ತುಪ್ಪ, ಜೇನಿನಂತೆ ಇದ್ದಾರೆ. ನಮಗೆ ಹಾಲಿಗೆ ಹುಳಿ ಹಿಂಡುವವರು ಬೇಡ. ಸಂಘಕ್ಕೆ ಸದಸ್ಯತ್ವವೇ ಶಕ್ತಿ. ಹಾಗಾಗಿ ಸದಸ್ಯತ್ವಕ್ಕೆ ಆದ್ಯತೆ ನೀಡಿzವೆ ಎಂದ ಅವರು ನಮ್ಮ ಸಮಾಜ ಬಾಂದವರ ಕುಟುಂಬದ ಗೋತ್ರ ತಿಳಿಸುವ ಕೆಲಸ ಮಾಡುತ್ತೇವೆ. ಮೂಲ ಕುಟುಂಬದ ನಿಖರ ಅಧ್ಯಯನ, ಜನಸಂಖ್ಯೆ, ಆರ್ಥಿಕ ಪರಿಸ್ಥಿತಿ, ಸರಕಾರಿ ನೌಕರರು, ವೈದ್ಯರು, ಇಂಜಿನಿಯರ್‍ಸ್, ಉದ್ಯಮಿಗಳ ಸರ್ವೆ ಮಾಡಲಿzವೆ. ಇವೆಲ್ಲದರ ನಡುವೆ ನಮ್ಮಲ್ಲಿ ಎದೆಗಾರಿಕೆ ಬೇಕು. ಶಿಕ್ಷಣ, ವಿಷಯದ ಮೇಲೆ ಪಾಂಡಿತ್ಯ ಇದ್ದರೆ ನಾವು ಯಾರಲ್ಲೂ ಭಯ ಪಡಬೇಕಾದ ಅಗತ್ಯವಿಲ್ಲ. ಇದನ್ನು ನಾವು ಸಾಧಿಸಬೇಕೆಂದರು.
ದುಷ್ಟ ಶಕ್ತಿಯ ಮಾಟ ನುಸುಳುವ ಮುನ್ನ ಕಟ್ಟುವೆವು ನಾವು ಹೊಸ ಸಂಘವನು: ಪ್ರಧಾನ ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಟ್ಟುವೆವು ಹೊಸ ಸಂಘವೊಂದನ್ನು -ಅದುವೆ ಗೌಡರ ಯಾನೆ ಒಕ್ಕಲಿಗರ ಮಾತೃ ಸಂಘವನ್ನು. ಹೊಸ ನೆತ್ತರು ಆರಿ ಹೋಗುವ ಮುನ್ನ ಹಳೆಬೇರು ಹೊಸ ಚಿಗುರು ಕೂಡಿರಲು ಮರಸೊಬಗು ಎಂಬಂತೆ ದುಷ್ಟ ಶಕ್ತಿಯ ಮಾಟ ನುಸುಳುವ ಮುನ್ನ ಕಟ್ಟುವೆವು ನಾವು ಹೊಸ ಸಂಘವನ್ನು ಅದು ನಮ್ಮ ಜಿಲ್ಲಾ ಮಾತೃ ಸಂಘವನ್ನು ಎಂದು ಮಾತು ಆರಂಭಿಸಿದ ಅವರು ದ ಕ ಗೌಡ ವಿದ್ಯಾವರ್ಧಕ ಸಂಘ ದಶಕಗಳ ಹಿಂದೆ ಆರಂಭವಾಗಿ ಇವತ್ತು ಹೆಮ್ಮರವಾಗಿ ಬೆಳೆದಿದೆ. ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಸುಳ್ಯ, ಪುತ್ತೂರಿನಲ್ಲಿ ಸಹಿತ ಎಲ್ಲಾ ಕಡೆ ಕಲ್ಯಾಣ ಮಂಟಪ ಕಟ್ಟುವ ಮೂಲಕ ಸಮಾಜದ ಉದ್ದಾರಕ್ಕೆ ಕಾರಣಕರ್ತರಾದವರು ಡಾ| ಕುರುಂಜಿ ವೆಂಕಟ್ರಮಣ ಗೌಡರು ಎಂದ ಅವರು ತಾಲೂಕು ಸಂಘದ ಬಳಿಕ ಸಮಾಜದಲ್ಲಿ ಮುಂದುವರಿದು ಜಿಲ್ಲಾ ಸಂಘ ಹುಟ್ಟಿಕೊಂಡಿತು. ಲೋಕಯ್ಯ ಗೌಡರ ನೇತೃತ್ವದಲ್ಲಿ ಆ ಸಂಘ ಆರಂಭಗೊಂಡಿತು. ೨೦೧೮ ರಲ್ಲಿ ಇದೆ ಪುತ್ತೂರಿನ ಎಲ್ಲಾ ತಾಲೂಕಿನ ಮುಖಂಡರ ಸಭೆ ನಡೆಯಿತು. ಆಗ ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿಯವರು, ಡಿ.ವಿ ಸದಾನದಂಗೌಡ, ಸುಳ್ಯದ ಕೆ.ವಿ.ಚಿದಾನಂದರು ಜೊತೆಯಾಗಿ ದಕ್ಷಿಣ ಕನ್ನಡ ಸೇವಾ ಸಂಘ ಹುಟ್ಟು ಹಾಕಿದ್ದೆವು. ಬಳಿಕ ಲೋಕಯ್ಯ ಗೌಡ ಅಧ್ಯಕ್ಷ, ಕಾರ್ಯದರ್ಶಿಯಾಗಿ ಚಿದಾನಂದ ಬೈಲಾಡಿ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಗೌರಿ ಬನ್ನೂರು, ಯುವ ಸಂಘದ ಅಧ್ಯಕ್ಷರಾಗಿ ಸುಳ್ಯದ ಅಕ್ಷಯ್ ಕೆ.ಸಿ. ಆಯ್ಕೆಯಾದರು. ಇದಕ್ಕೆ ಬೈಲಾ ರಚನೆ ಸಂದರ್ಭ ಕಾಣದ ಕೈಗಳ ಶಕ್ತಿಯಿಂದ ಅದು ತಟಸ್ಥವಾಯಿತು. ನಾನು ನನ್ನದು, ನಾನು ಹೇಳಿದಂತೆ ಆಗಬೇಕೆಂಬ ಮನೋಭಾವದಿಂದ ಅದು ವೇಗವನ್ನು ಕಳೆದುಕೊಂಡಿತು. ಇದೇ ಸಂದರ್ಭ ಕೋರೋನಾವು ಬಂತು. ಆದರೆ ಕೊರೋನಾ ಕಳೆದ ಬಳಿಕ ಏಕಾಏಕಿ ಪತ್ರಿಕೆಯಲ್ಲಿ ನಾವು ಕಂಡು ಕೊಂಡಂತೆ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಡಿ.ವಿ.ಸದಾನಂದ ಗೌಡ, ಸಂಜೀವ ಮಠಂದೂರು ಜೊತೆಯಾಗಿ ಜಿಲ್ಲಾ ಸಂಘ ಪ್ರಾರಂಭಗೊಂಡಿತು. ಈ ವಿಚಾರ ನಮ್ಮ ಆರು ತಾಲೂಕಿನ ಸಂಘದವರಿಗೆ ಗೊತ್ತಿರಲಿಲ್ಲ. ಇದು ನೋವು ತಂದಿದೆ. ಇದನ್ನು ನಾವು ಒಪ್ಪಿಕೊಳ್ಳದೆ ಸುಳ್ಯದಲ್ಲಿ ೨೦೨೪ರ ಮಾ.೯ರಂದು ಸಭೆ ಸೇರಿ ಹೊಸ ಸಂಘದ ಬೈಲಾ ಸಿದ್ಧತೆ ಮಾಡಿದೆವು. ೨೦೨೪ರ ಅಗಸ್ಟ್ ೩೦ಕ್ಕೆ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘವನ್ನು ನೋಂದಾವಣೆ ಮಾಡಿದೆವು. ಆಗ ಪುತ್ತೂರು ಮತ್ತು ಕಡಬ ಸಂಘ ಮಾತ್ರ ಹೊರಗಿನಿಂದ ಬೆಂಬಲ ನೀಡಿದರು. ಸುಳ್ಯದಲ್ಲಿ ಸಮ್ಮಿಲನ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದಾಗ ರಾಜಕೀಯ ನಾಯಕರು ಪುತ್ತೂರಿನಲ್ಲಿ ಸಭೆ ಮಾಡಿ ನಮ್ಮನ್ನೆಲ್ಲ ಸಭೆ ಕರೆದು ಒಂದು ಗೂಡಿಸಿ ಮತ್ತೆ ಬೇರ್ಪಡಿಸುವ ಕೆಲಸ ಮಾಡಲಾಯಿತು. ಆಗ ನಾವು ವಿಶೇಷವಾಗಿ ಪ್ರತ್ಯೇಕವಾಗಿ ಇರುವ ನಿರ್ಣಯ ಕೈಗೊಂಡು ನಾವು ಇವತ್ತು ಸಂಘದ ಅಧಿಕೃತ ಉದ್ಘಾಟನಗೊಂಡಿದೆ. ಸುಮಾರು ೨ಸಾವಿರ ಮಂದಿ ಸದಸ್ಯರಿದ್ದಾರೆ. ಮೂರು ವಿಭಾಗದಲ್ಲಿ ಸದಸ್ಯತನವನ್ನು ಮಾಡಿzವೆ. ನಮ್ಮ ಸಂಘದ ಹಲವು ಯೋಜನೆ ಇದೆ. ಸಮೀಕ್ಷೆ ಮಾಡುವ ಉzಶ ಇಟ್ಟುಕೊಂಡಿzವೆ. ನಮ್ಮ ಸಂಸ್ಕೃತಿ ಉಳಿಸುವ, ಶೈಕ್ಷಣಿಕ ಆರ್ಥಿಕ ನೆರವು ಮಾಡುವ ಉzಶವಿದೆ. ಸಂಘದ ಬೆಳವಣಿಗೆ ತಮ್ಮೆಲ್ಲರ ಸಹಕಾರ ಬೇಕು. ಒಂದು ಕಾಲದಲ್ಲಿ ಶಿಕ್ಷಣಕ್ಕಾಗಿ ಹಂಬಲಿಸುತ್ತಿದ್ದ ನಮ್ಮ ಸಮಾಜ ಶಿಕ್ಷಣದೊಂದಿಗೆ ಸಾಮಾಜಿಕ ಸ್ಥಾನ ಮಾನ ಪಡೆದುಕೊಂಡಿದೆ. ನಾವು ಪ್ರಾಮಾಣಿಕ ವಾಗಿ ಸಂಗವನ್ನು ನಡೆಸೋಣ ಎಂದರು.
ಪದಾಧಿಕಾರಿಗಳ ಗುರುತು ಚೀಟಿ ಬಿಡುಗಡೆ: ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃಸಂಘದ ಪದಾಧಿಕಾರಿಗಳು ಮತ್ತು ತಾಲೂಕು ಘಟಕದ ಅಧ್ಯಕ್ಷರು ಪದಾಧಿಕಾರಿಗಳ ಗುರುತಿನ ಚೀಟಿಯನ್ನು ಡಾ ರೇಣುಕಾಪ್ರಸಾದ್ ಉದ್ಘಾಟಿಸಿ ಸಾಂಕೇತಿಕವಾಗಿ ವಿತರಣೆ ಮಾಡಿದರು. ಸಂಘದ ಕಾರ್ಯದರ್ಶಿ ಮಂಗಳೂರಿನ ಕೆ ರಾಮಣ್ಣ ಗೌಡ ಕೊಂಡೆಬಾಯಿ ಕಾರ್ಯಕ್ರಮ ನಿರ್ವಹಿಸಿ ಪೋಷಕ ಸದಸ್ಯತ್ವದ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭ ಸದಸ್ಯರನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ವಿತರಿಸಲಾಯಿತು.


ಸಾಧಕರಿಗೆ ವಿಶೇಷ ಗೌರವ ಸನ್ಮಾನ :
ಪೂವಾಜೆ ಕುಶಾಲಪ್ಪ ಗೌಡ, ಹರೀಶ್ ಇಂಜಾಡಿ,ಚಂದ್ರಕೋಲ್ಚಾರ್, ಕೆ ವೀರಪ್ಪ ಗೌಡ ಕಣ್ಯಾಲ್, ಭರತ್ ನೆಕ್ರಾಜೆ, , ಡಾ.ದಾಮೋದರ ನಾರಾಲು, ಜಿಲ್ಲಾ ಸಂಘದ ಕಾರ್ಯದರ್ಶಿ ಕಿಶೋರ್ ಕುಮಾರ್ ನೆಲ್ಲಿಕಟ್ಟೆ ಅವರು ಸನ್ಮಾನಿತರನ್ನು ಪರಿಚಯಿಸಿದರು. ಇದೇ ಸಂದರ್ಭ ಸದಸ್ಯತ್ವವನ್ನು ಮಾಡಿದವರನ್ನು ಗೌರವಿಸಲಾಯಿತು. ಜೊತೆಗೆ ಮಹಾಪೂಷಕರು, ಪೋಷಕರನ್ನು ಗೌರವಿಸಲಾಯಿತು. ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಆಧ್ಯಕ್ಷ ಪಿ ಎಸ್ ಗಂಗಾಧರ, ಮಂಗಳೂರು ಒಕ್ಕಲಿಗರ ಯಾನೆವಗೌಡರ ಸೇವಾ ಸಂಘದ ಅಧ್ಯಕ್ಷ ಸೌಮ್ಯ ಸುಕುಮಾರ್, ಕಾರ್ಯದರ್ಶಿ ಕೆ ರಾಮಣ್ಣ ಗೌಡ ಕೊಂಡೆಬಾಯಿ, ಉಪಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಉಪಾಧ್ಯಕ್ಷ ರಾಮದಾಸ್ ಗೌಡ ಎಸ್, ಗೌರವ ಸಲಹೆಗಾರರಾದ ಎ.ರಾಮಚಂದ್ರ, ಮಾಧವ ಗೌಡ ಜಾಕೆ, ಗಂಗಾಧರ ಗೌಡ ಕೆಮ್ಮಾರ, ಲಕ್ಷ್ಮಣ ಗೌಡ ಕುಂಟಿಕಾನ, ಭಾಸ್ಕರ ಗೌಡ ಕೋಡಿಂಬಾಳ, ಚಂದ್ರಶೇಖರ ಗೌಡ ಗಿರಿನಿವಾಸ, ಸೋಮೇ ಗೌಡ, ಪೂರ್ಣಿಮಾ ಕೆ.ಎಮ್, ಬಿ.ಕೆ.ಕುಸುಮಾಧರ ಬೇರ್ಯ, ಆಡಳಿತ ನಿರ್ದೇಶಕ ಪಿ.ಎಸ್ ಗಂಗಾಧರ್, ಸಿ.ಕುಶಾಲಪ್ಪ ಚೆನ್ನಕಜೆ, ಸೌಮ್ಯ ಸುಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಚಂದ್ರಕೋಲ್ಚಾರ್, ಪಿ ಸಿ ಜಯರಾಮ ಗೌಡ, ಕವಿರಾಜ್ ಗುಂಡ್ಯ, ಮೋನಪ್ಪ ಗೌಡ, ಧರ್ಮಾವತಿ, ಬೆಳ್ತಂಗಡಿಯ ಜಯಾನಂದ ಟಿ, ಸಂತೋಷ್ ಜಾಕೆ, ಗೋಪಾಲಕೃಷ್ಣ ಗುಂಡೋಡಿ, ಶ್ರೀಧರ ಗೌಡ ಅಂಗಡಿಹಿತ್ಲು, ಗಣೇಶ್ ಗೌಡ ಕಲಾಯಿ, ಲೋಕೇಶ್ ಚಾಕೋಟೆ, ದೊಡ್ಡಣ್ಣ ಬರಮೇಲು, ವೆಂಕಪ್ಪ ಗೌಡ ಬಂಟ್ವಾಳ, ದಿನೇಶ್ ಗೌಡ, ಮೋಹನ್ ಗೌಡ ಬೈಲು, ತನಿಯಪ್ಪ ಗೌಡ ಬಂಟ್ವಾಳ, ಮೋಹನ್ ಗೌಡ, ಮುರಳಿಧರ ಗೌಡ ಕೆಮ್ಮಾರ, ಕೃಷ್ಣಪ್ಪ ಗೌಡ, ಈಶ್ವರಪ್ಪ ಗೌಡ, ಶೋಭಾನಾರಾಯಣ ಗೌಡ, ನಾರಾಯಣ ಗೌಡ ಅವರು ಅತಿಥಿಗಳಿಗೆ ತಾಂಬೂಲ, ಶಲ್ಯ ನೀಡಿ ಗೌರವಿಸಿದರು. ಸುಳ್ಯ ತಾಲೂಕು ಮಹಿಳಾ ಘಟಕದ ಕಾರ್ಯದರ್ಶಿ ಸವಿತಾ ಸತೀಶ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಕೆ ಲಿಂಗಪ್ಪ ಗೌಡ ಸ್ವಾಗತಿಸಿದರು. ಆಡಳಿತ ಮಂಡಳಿ ನಿರ್ದೇಶಕ ಬಂಟ್ವಾಳ – ವಿಟ್ಲ ಘಟಕದ ವಿಶ್ವನಾಥ ಗೌಡ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕೋಶಾಧಿಕಾರಿ ಹೆಚ್ ಪದ್ಮಗೌಡ ಬೆಳ್ತಂಗಡಿ ವಂದಿಸಿದರು. ಸಭಾ ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು. ಸುದ್ದಿ ಯು ಟ್ಯೂಬ್ ಚಾನೆಲ್‌ನಲ್ಲಿ ಕಾರ್ಯಕ್ರಮ ನೇರಪ್ರಸಾರ ಮಾಡಲಾಗಿತ್ತು.

ಮೂವರು ಮಹಾನಿಯರಿಗೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ:

ನಾಡಪ್ರಭು ಕೆಂಪೆಗೌಡ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ, ಸುಳ್ಯದ ಶಿಲ್ಪಿ ಕುರುಂಜಿ ವೆಂಕಟರಮಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಬಳಿಕ ವೇದಿಕೆಯ ಕಾರ್ಯಕ್ರಮ ಆರಂಭಿಸಲಾಯಿತು.
ಸಮೀಕ್ಷೆಗೆ ಆಪ್ :
ರಾಜ್ಯ ಒಕ್ಕಲಿಗ ಸಂಘದ ಕರ್ನಾಟಕ ರಾಜ್ಯದ ಒಕ್ಕಲಿಗ ಸಮೀಕ್ಷೆ ಆಪ್ ಮಾಡಲಾಗುತ್ತಿದೆ. ಅದರಲ್ಲಿ ಪ್ರತಿಯೊಂದು ಮನೆಯ ವಿಚಾರ, ಪ್ರೊಪೆಷನ್, ಅವರ ಕೆಲಸ ಕಾರ್ಯಗಳ ಹಾಗು ವಧುವರರ ಅನ್ವೇಷಣೆ ಕೂಡಾ ನಡೆಯಲಿದೆ ಇನ್ನು ಎರಡು ತಿಂಗಳ ಒಳಗೆ ಅದು ಜಾರಿಯಾಗಲಿದೆ. ಎರಡು ತಿಂಗಳಲ್ಲಿ ಇದು ಆದೇಶ ಬರಲಿದೆ. ಮುಂದೆ ರಾಜ್ಯದಲ್ಲಿ ಆನ್ ಲೈನ್ ಮೂಲಕ ನೊಂದಾಯಿಸಬೇಕು. ರಾಜ್ಯ ಒಕ್ಕಲಿಗ ಸಂಘಕ್ಕೆ ಸದಸ್ಯತ್ವಕ್ಕೆ ಆನ್ ಲೈನ್ ಒಪನ್ ಆಗಿದೆ ಎಂದು ಡಾ. ರೇಣುಕಾಪ್ರಸಾದ್ ಕೆ.ವಿ ಅವರು ಹೇಳಿದರು.
ಶೃಂಗೇರಿ ಮಠ ನಮಗೆ ಗುರುಪೀಠ:
ಸಮುದಾಯಕ್ಕೆ ಆದಿ ಚುಂಚನಗಿರಿ ಮಠವಿದೆ. ಅದಕ್ಕೆ ಗೌರವ ಕೊಡುವ ಕೆಲಸ ಆಗಬೇಕು. ಅದೇ ರೀತಿ ನಮಗೆ ಗರುಪೀಠ ಶೃಂಗೇರಿ. ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ವಿಚಾರ ಗೊತ್ತಿದ್ದಂತೆ ನಮಗೆ ಶೃಂಗೇರಿ ನಮಗೆ ಗುರುಪೀಠ. ಗುರುಕಾಣಿಕೆ ಇದ್ದರೆ ಅಲ್ಲಿಗೆ ತಲುಪಿಸಬೇಕು. ಶೃಂಗೇರಿ ಮಠವನ್ನು ಬಿಡಬಾರದು. ಒಂದುವರ್ಷವೂ ಎರಡುವರ್ಷವೂ ಆಗಲಿ ಅಲ್ಲಿಗೆ ಹೋಗಿ ಕಾಣಿಕೆ ಕೊಡಿ. ಜೀವನದಲ್ಲಿ ನಾವು ಒಳ್ಳೆಯ ರೀತಿಯಲ್ಲಿ ಬದುಕಲು ಕಲಿಯಬೇಕು.

  • ಲೋಕಯ್ಯ ಗೌಡ ಅಧ್ಯಕ್ಷರು ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘ ದ.ಕ.ಜಿಲ್ಲೆ