ಎನ್ಲೈಟ್ ಎಜುಕೇಶನಲ್ ಸರ್ವಿಸಸ್(ರಿ.) ವತಿಯಿಂದ 2024-25 ನೇ ಸಾಲಿನಲ್ಲಿ SSLC ಹಾಗೂ PUC ಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಸಮ್ಮೇಳನ ಕಾರ್ಯಕ್ರಮ ಸುಳ್ಯದ ಅನ್ಸಾರಿಯ ಗಲ್ಫ್ ಆಡಿಟೋರಿಯಂ ನಲ್ಲಿ ನಡೆಯಿತು.
ಶನಿವಾರ ಬೆಳಗ್ಗೆ 9:30ಕ್ಕೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಸುಮಾರು 100ಕ್ಕೂ ಮಿಕ್ಕ ವಿದ್ಯಾರ್ಥಿಗಳು ಭಾಗವಹಿಸಿ ಫಲಪ್ರಧರಾದರು. ಈ ಪೈಕಿ SSLC ಹಾಗೂ PUC ಯ 3 ವಿಭಾಗದಲ್ಲಿ ತಾಲೂಕಿನಲ್ಲೇ ಅತೀ ಹೆಚ್ಚಿನ ಅಂಕ ಪಡೆದ ಸಮುದಾಯದ 4 ವಿದ್ಯಾರ್ಥಿಗಳಿಗೆ ತಲಾ 10,000 ರೂಪಾಯಿಯ ವಿದ್ಯಾರ್ಥಿ ವೇತನವನ್ನು ನೀಡಿ ಗೌರವಿಸಲಾಯಿತು. SSLC ಯಲ್ಲಿ ನಿಶಾಲ್ ಅಹ್ಮದ್ , PUC ಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಮಿನ ಕುರ್ರತ್ ಐನ, ವಾಣಿಜ್ಯ ವಿಭಾಗದಲ್ಲಿ ಮುಹಮ್ಮದ್ ಲಾಝಿಮ್, ಕಲಾ ವಿಭಾಗದಲ್ಲಿ ಫಾತಿಮಾ ರೆಹನ ಎಂಬ ವಿದ್ಯಾರ್ಥಿಗಳು ವಿಶೇಷ ನಗದು ಪುರಸ್ಕಾರವನ್ನು ಪಡಕೊಂಡರು.
ಕಾರ್ಯಕ್ರಮವನ್ನು ಅನ್ಸಾರಿಯಾದ ಮುದರ್ರಿಸ್ ಬಹು| ಅಬೂಬಕ್ಕರ್ ಹಿಮಮಿ ಸಖಾಫಿ ದುಆಶೀರ್ವಚನಗೈದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಅಲ್ಪಸಂಖ್ಯಾತ ಸಹಕಾರಿ ಸಂಘದ ಅಧ್ಯಕ್ಷರಾದ ಇಕ್ಬಾಲ್ ಎಲಿಮಲೆ ನಡೆಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಹಿರಿಯ ಸಾಹಿತಿಗಳೂ,NMC ನಿವೃತ್ತ ಪ್ರಾಂಶುಪಾಲರಾದ ಪ್ರೊ. ಪೂವಪ್ಪ ಕಣಿಯೂರು ರವರು ಪ್ರಸಕ್ತ ಕಾಲಘಟ್ಟದಲ್ಲಿನ ಶಿಕ್ಷಣದ ಮಹತ್ವವನ್ನು ಹಾಗೂ ಇಂಥಹ ಕಾರ್ಯಕ್ರಮಗಳನ್ನು ಆಯೋಜಿಸುವ nLIGHT ಸಂಸ್ಥೆಗೆ ಪ್ರಶಂಸನೀಯ ಮಾತುಗಳನ್ನಾಡಿ ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹಮೀದ್ ಕುತ್ತಮೊಟ್ಟೆ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಬೆಂಬಲ ಸೂಚಿಸಿದ್ದು ಮಾತ್ರವಲ್ಲದೆ ಊರಿನಲ್ಲಿ ಸಮುದಾಯದ ಯಾವುದೇ ವಿದ್ಯಾರ್ಥಿಗಳು IAS,IPS ಆಗಲು ಇಚ್ಛಿಸುತ್ತಿದ್ದರೆ ಅವರ ಸಂಪೂರ್ಣ ವೆಚ್ಚವನ್ನು ತಾನು ಭರಿಸುವುದಾಗಿ ಘೋಷಿಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವರಣಾ ಪತ್ರವನ್ನು ಅನ್ಸಾರಿಯ ಎಜುಕೇಶನ್ ಸೆಂಟರ್ ಅಧ್ಯಕ್ಷರಾದ ಹಾಜಿ ಅಬ್ದುಲ್ ಮಜೀದ್ ಜನತಾ ರವರು ಬಿಡುಗಡೆಗೊಳಿಸಿದರು















ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರಾದ ಮುಜೀಬ್ ರವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅನ್ಸಾರ್ ಅಧ್ಯಕ್ಷರಾದ ಹಾಜಿ ಎಸ್ ಅಬ್ದುಲ್ಲ ಕಟ್ಟೆಕ್ಕಾರ್, ಎಂ.ಜೆ.ಎಂ ಪ್ರ.ಕಾರ್ಯದರ್ಶಿ ಹಾಜಿ ಮೊಯಿದೀನ್ ಫ್ಯಾನ್ಸಿ, ಬೆಳ್ಳಾರೆ ಜಮಾಅತ್ ಸಮಿತಿ ಸದಸ್ಯ ಬಶೀರ್ ಬೆಳ್ಳಾರೆ, ಹಾಜಿ ಅಹ್ಮದ್ ಸುಪ್ರೀಂ, ಹಾಜಿ ಅಹ್ಮದ್ ಪಾರೆ, ಸುಳ್ಯ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಎ.ಜೆ.ಎಂ ಗಾಂಧಿನಗರ ಅಧ್ಯಕ್ಷರಾದ ಹಾಜಿ ಮುಹಮ್ಮದ್ ಕೆ.ಎಂ.ಎಸ್, ಅಕ್ಬರ್ ಕರಾವಳಿ, ತಾಜುದ್ದೀನ್ ಬಿಳಿಯಾರ್, ಪತ್ರಕರ್ತರಾದ ಹಸೈನಾರ್ ಜಯನಗರ, ರಶೀದ್ ಜಟ್ಟಿಪಳ್ಳ ಮೊಯಿದೀನ್ ಎ.ಬಿ ಕಳಂಜ ಉಪಸ್ಥಿತರಿದ್ದರು.
nLight ಕಾರ್ಯಕಾರಿ ಸಮಿತಿ ಸದಸ್ಯರಾದ ಆಶಿಕ್ ಸುಳ್ಯ, ಮಸೂದ್ ಮಚ್ಚು, ಶಹೀದ್ ಪಾರೆ, ರವೂಫ್ ಆರ್.ಬಿ.ಎ, ಹಮೀದ ಕೌಸರ್, ಆಯಿಷಾ ತಾಸೀನ್, nLight ಪೂರ್ವ ವಿದ್ಯಾರ್ಥಿ ಸಂಘದ ಸದಸ್ಯರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.
ತಾಲೂಕಿನ ವಿವಿಧ ಕಡೆಗಳಿಂದ ಬಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳಾದ ಕಮಾಲ್ ಎ. ಬಿ ಸ್ವಾಗತಿಸಿದರು. ಆಸಿಫ್ ಪನ್ನೆ, ನಿಸಾರ್ ಶೈನ್ ಕಾರ್ಯಕ್ರಮ ನಿರೂಪಿಸಿದರು.










