














ಜಾಲ್ಸೂರು ಗ್ರಾಮದ ಕುಕ್ಕಂದೂರು ಸಿ.ಆರ್.ಸಿ.ಯ ನಿವಾಸಿ ಕೃಷ್ಣ ಸ್ವಾಮಿ ಆರ್.ಕುಕ್ಕಂದೂರು ಎಂಬವರು ಮೇ.31ರಂದು ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಕೆ.ಎಫ್.ಡಿ.ಸಿ.ರಬ್ಬರ್ ಟ್ಯಾಪರ್ ವೃತ್ತಿ ನಡೆಸಿ ನಿವೃತ್ತಿ ಹೊಂದಿದ್ದರು. ಸ್ವಂತ ಬ್ಯಾಂಡ್ ಸೆಟ್ ಹೊಂದಿದ್ದ ಅವರು ಕಾಲನಿಯ ಕಾರ್ಯಕ್ರಮಗಳಿಗೆ ಅವರ ನೇತೃತ್ವದಲ್ಲಿಯೇ ಬ್ಯಾಂಡ್ ವಾದನ ನಡೆಯುತ್ತಿತ್ತು.
ಮೃತರು ಪತ್ನಿ ಪಳನಿಯಮ್ಮ, ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧುಗಳನ್ನು ಅಗಲಿದ್ದಾರೆ.










