ಗೂನಡ್ಕ : ಪೆಲ್ತಡ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿ ಬರೆಗೆ ಕಾರು ಡಿಕ್ಕಿ: ಅಪಾಯದಿಂದ ಪಾರು

0

ಗೂನಡ್ಕ ಪೆಲ್ತಡ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆಯ ಬರೆಗೆ ಡಿಕ್ಕಿ ಹೊಡೆದ ಘಟನೆ ಜೂ.2 ರಂದು ಬೆಳಿಗ್ಗೆ ಸಂಭವಿಸಿದೆ.

ಸಂಪಾಜೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬ್ರೀಝಾ ಕಾರು ಒಮ್ಮಿಂದೊಮ್ಮೆಲೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಚರಂಡಿಯ ಬರೆಗೆ ಡಿಕ್ಕಿಯಾಗಿದೆ. ಕಾರಿನಲ್ಲಿ ಐದು ಜನ ಪ್ರಯಾಣಿಕರಿದ್ದು, ಪುತ್ತೂರು ಮೂಲವರು ತಿಳಿದುಬಂದಿದೆ. ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.