ಕೂತ್ಕುಂಜ ಸರಕಾರಿ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪರಮೇಶ್ವರ ಗೌಡ ಬಿಳಿಮಲೆ ಯವರು ನೋಟ್ ಪುಸ್ತಕ ಮತ್ತುಕಲಿಕಾ ಸಾಮಾಗ್ರಿಗಳನ್ನು ಕೊಡುಗೆಯಾಗಿ ಜೂ.೨ ರಂದು ವಿತರಿಸಿದರು.ಇದೇ ವೇಳೆ ಸರಕಾರ ನೀಡಿದ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಣೆ ನಡೆಯಿತು.















ಕಾರ್ಯಕ್ರಮದಲ್ಲಿ ಪರಮೇಶ್ವರ ಬಿಳಿಮಲೆ, ಗ್ರಾಮ ಪಂಚಾಯತ್ ಸದಸ್ಯೆ ನೇತ್ರಾವತಿ ಕಲ್ಲಾಜೆ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ತಿಮ್ಮಪ್ಪ ಗೌಡ ಕೂತ್ಕುಂಜ,ಎಸ್ ಡಿ ಎಂ ಸಿ ಅಧ್ಯಕ್ಷ ತುಳಸಿ ಕುಮಾರ ಅಜ್ಜಿಹಿತ್ಲು, ವೆಂಕಟೇಶ್ವರ ಜೋಯಿಸ, ಮುಖ್ಯ ಶಿಕ್ಷಕಿ ತಸ್ಲಿನಾ, ಎಸ್ ಡಿ ಎಂ ಸಿ ಸದಸ್ಯರು , ಪೋಷಕರು ,ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.










