ಗುತ್ತಿಗಾರಿನ ಸರ್ಕಾರಿನ ಪಿ..ಯು ಕಾಲೇಜಿನಲ್ಲಿ ಜೂ.2 ರಂದು ಸುಳ್ಯ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ನಡೆಯಿತು.















ಆರಂಭದಲ್ಲಿ ಶಾಲಾ ವಿದ್ಯಾರ್ಥಿ, ಅಧಿಕಾರಿಗಳು, ಜನಪ್ರತಿನಿಧಿಗಳು ಶಾಲೆಯಿಂದ ಹೊರಟು ಗುತ್ತಿಗಾರು ಪೇಟೆಯಲ್ಲಿ ಬ್ಯಾಂಡ್ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಮತ್ತೆ ಶಾಲೆಗೆ ಬರಲಾಯಿತು.

ಬಳಿಕ ಶಾಲೆಯಲ್ಲಿಸಭಾ ಬಕಾರ್ಯಕ್ರಮ ನಡೆಯಿತು. ಗುತ್ತಿಗಾರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಮೂಕಮಲೆ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮೂಹ ಸಂಪನ್ನೂಲ ಅಧಿಕಾರಿ ಶ್ರೀಮತಿ ಶೀತಲ್, ಶಿಕ್ಷಣ ಸಂಯೋಜಿಕಿ ಸಂದ್ಯಾ, ಗ್ತಾ.ಪಂ ಉಪಾಧ್ಯಕ್ಷೆ ಭಾರತಿ ಸಾಲ್ತಾಡಿ ಎಸ್.ಡಿ.ಎಂ.ಸಿ ಅಧ್ಯಕ್ಷ ಕೇಶವ ಕಾಂತಿಲ, ಗ್ರಾ.ಪಂ ಸದಸ್ಯ ಮಾಯಿಲಪ್ಪ ಗೌಡ, ಸಿ.ಆರ್ .ಪಿ ಕುಶಾಲಪ್ಪ ಟಿ,ಪ್ರಾಂಶುಪಾಲೆ ಚೆನ್ನಮ್ಮ, ಪ್ರೌಢಶಾಲಾ ಮುಖ್ಯೋಪಾದ್ಯಾಯಿನಿ ಪೂರ್ಣಿಮಾ ವೇದಿಕೆಯಲ್ಲಿದ್ದರು ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು.










