ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ. 2 ರಂದು ಶಾಲಾ ಪ್ರಾರಂಭೋತ್ಸವ ನಡೆಸಲಾಯಿತು.
ಈ ವೇಳೆ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ಸ್ವಾಗತ ಮಾಡಲಾಯಿತು. ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಣೆ ಮಾಡಲಾಯಿತು. ಸಭಾ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಲಿಗೋದರ ಆಚಾರ್ಯ ಯನ್ ಸಭಾಧ್ಯಕ್ಷತೆ ವಹಿಸಿದ್ದರು.
















ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸೌಮ್ಯಶ್ರೀ ಪಲ್ಲೋಡಿ ದೀಪ ಬೆಳಗಿಸಿದರು.ಸದಸ್ಯರಾದ ದಾಮೋದರ ನೇರಳ, ಮೋಹನ್ ಅಡ್ಕ, ಪುರುಷೋತ್ತಮ,ಧನುರಾಜ್, ಯಕ್ಷಿತಾ, ವೇದಾವತಿ ಪಲ್ಲೋಡಿ, ಮುಖ್ಯ ಶಿಕ್ಷಕಿ ಲೀಲಾಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಲೀಲಾಕುಮಾರಿ ಶಿಕ್ಷಕರಾದ ನೇತ್ರಾವತಿ ಮತ್ತು ಮೋಹನ್ ಪ್ರಸಾದ್ ಶೈಕ್ಷಣಿಕ ವಿಚಾರದ ಬಗ್ಗೆ ಮಾತನಾಡಿದರು. ಶಿಕ್ಷಕಿ ಚೇತನ ಕುಮಾರಿ ನಿರೂಪಿಸಿದರು. ಶಿಕ್ಷಕಿ ಗುಲಾಬಿ ವಂದಿಸಿದರು. ವಿದ್ಯಾರ್ಥಿಗಳ ಪೋಷಕರು, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.










