ಕುಕ್ಕೆ ಸುಬ್ರಹ್ಮಣ್ಯದಲ್ಲಿ ಒಳಾಂಗಣ ಪ್ರವೇಶಿಸಿದ ದೇವರು

0

ಶ್ರೀ ದೇವರ ನಿತ್ಯೋತ್ಸವ ಸಮಾಪ್ತಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶ್ರೀದೇವರ ಹೊರಾಂಗಣ ಉತ್ಸವಾದಿಗಳು ಜೂ.1 ರಂದು ತೆರೆ ಕಂಡಿತು. ದೇವರು ಒಳಾಂಗಣ ಪ್ರವೇಶಿಸುವುದರೊಂದಿಗೆ ಶ್ರೀ ದೇವರ ನಿತ್ಯೋತ್ಸವ ಸಂಪನ್ನವಾಯಿತು.ಶುದ್ಧ ಷಷ್ಠಿಯ ದಿನ ರಾತ್ರಿ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ ಶ್ರೀ ದೇವರ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿತು. ಬಳಿಕ ಶ್ರೀ ದೇವರು ಒಳಾಂಗಣ ಪ್ರವೇಶಿಸುವುದರೊಂದಿಗೆ ಕ್ಷೇತ್ರದಲ್ಲಿ ಉತ್ಸವಗಳು ಕೊನೆಯಾಯಿತು.


ಜೇಷ್ಠ ಶುದ್ಧಷಷ್ಠಿಯ ದಿನ ರಾತ್ರಿ ಮಹಾಪೂಜೆಯ ಬಳಿಕ ಹೊರಾಂಗಣದಲ್ಲಿ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವಗಳು ನೆರವೇರಿತು. ಆನೆ, ಬಿರುದಾವಳಿ, ಬ್ಯಾಂಡ್, ನಾದಸ್ವರ, ಸ್ಯಾಕ್ಸೋಪೋನ್‌ಗಳನ್ನೊಳಗೊಂಡ ಹೊರಾಂಗಣ ಉತ್ಸವ ನೆರವೇರಿತು. ಈ ನಂತರ ದೇವಾಲಯ ನಗರದಲ್ಲಿ ದೇವರು ಗರ್ಭಗೃಹ ಪ್ರವೇಶಿಸುವುದರೊಂದಿಗೆ ನಿತ್ಯೋತ್ಸವವಕ್ಕೆ ತೆರೆಯಾಯಿತು.ಸಹಸ್ರಾರು ಊರ ಮತ್ತು ಪರವೂರ ಭಕ್ತಾಧಿಗಳು ಈ ಸಂದರ್ಭದಲ್ಲಿ ಶ್ರೀ ದೇವರ ಉತ್ಸವಾಧಿಗಳನ್ನು ಶ್ರದ್ಧಾಭಕ್ತಿಯಿಂದ ವೀಕ್ಷಿಸಿದರು.

ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ಯೇಸುರಾಜ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರು, ಶ್ರೀ ದೇವಳದ ಸಿಬ್ಬಂದಿಗಳು, ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.

ಮುಂದಿನ ದೀಪಾವಳಿ ಅಮವಾಸ್ಯೆಯಂದು ಮತ್ತೆ ಶ್ರೀ ದೇವರು ಪ್ರವೇಶಿಸುವುದರ ಮೂಲಕ ಉತ್ಸವಾದಿಗಳು ಮತ್ತು ಹರಕೆ ಉತ್ಸವಗಳು ಆರಂಭವಾಗುತ್ತದೆ. ಆದರೆ ರಥಬೀದಿಯಲ್ಲಿ ರಥೋತ್ಸವವು ಜಾತ್ರಾ ಸಮಯದಲ್ಲಿ ಆರಂಭವಾಗಲಿದ್ದು, ಆ ಬಳಿಕ ಹರಕೆಯ ರಥೋತ್ಸವಗಳು ನೆರವೇರಲಿದೆ.