ನಂಬರ್ ಗೇಮ್ ಆಟ : ಪೋಲೀಸ್ ದಾಳಿ – ಇಬ್ಬರ ಮೇಲೆ ಪ್ರಕರಣ : ಒಬ್ಬನ ಬಂಧನ

0

ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್‌ನಿಲ್ದಾಣ ಪಕ್ಕದ ಬಿಲ್ಡಿಂಗ್ ನಲ್ಲಿ ನಂಬರ್ ಗೇಮ್ ಆಟ ನಡೆಯುತ್ತಿದ್ದಲ್ಲಿಗೆ ಸುಳ್ಯ ಕ್ರೈಂ ಎಸ್.ಐ.‌ಸರಸ್ವತಿಯವರ ನೇತೃತ್ವದಲ್ಲಿ ಧಾಳಿ ನಡೆಸಿ ಆಟ ಆಡಿಸುತ್ತಿದ್ದ ಇಬ್ಬರ ಮೇಲೆ ಪ್ರಕರಣ ದಾಖಲಿಸಿದ ಹಾಗೂ ಈ ಪೈಕಿ ಒಬ್ಬನನ್ನು ಬಂಧಿಸಲಾಗಿರುವ ಘಟನೆ ಜೂ.4ರಂದು ವರದಿಯಾಗಿದೆ.

ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಪಕ್ಕದ ಕೆಲವು ದಿನಗಳಿಂದ ನಂಬರ್ ಗೇಮ್ ಆಟ ನಡೆಯುತ್ತಿತ್ತು. ಕೂಲಿ ಕಾರ್ಮಿಕರು ಸಹಿತ ಹಲವರು‌ ಬೆಳಗ್ಗೆ ಯಿಂದಲೇ ಬಂದು ದುಡ್ಡು ಕಳೆದುಕೊಳ್ಳುತ್ತಿದ್ದರು. ಈ ಕುರಿತು ಸುಳ್ಯ ಪೋಲೀಸರಿಗೆ ಮಾಹಿತಿ ಹೋಗಿ ಅವರು ಧಾಳಿ ನಡೆಸಿದ್ದಾರೆ. ಆಟ ನಡೆಸುತ್ತಿದ್ದರೆನ್ನಲಾದ ನಿತಿನ್ ಮತ್ತು ಶರತ್ ಆಳ್ವ ಎಂಬವರ ಮೇಲೆ ಪೋಲೀಸರು ಕೇಸು ದಾಖಲಿಸಿದ್ದು, ಸ್ಥಳದಲ್ಲಿದ್ದ ನಿತಿನ್ ರನ್ನ ವಶ ಪಡೆದರು.
ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಒಂದಂಕಿ ಗೇಮ್, ನಂಬರ್ ಗೇಮ್ ಇತ್ಯಾದಿ ಹೆಸರಿನಲ್ಲಿ ಈ ಆಟ ನಡೆಯುತ್ತಿದ್ದು ಹಲವು ಹಣ ಕಳೆದುಕೊಳ್ಳುತ್ತಿದ್ದರು. ನಗರದ ಕೆಲವು ಕಡೆ ಈ ಆಟ ವ್ಯಾಪಿಸಿತ್ತು.

ಸುಳ್ಯ ತಾಲೂಕು ಪಂಚಾಯತ್ ಸಭೆಗಳಲ್ಲಿ, ನಗರ ಪಂಚಾಯತ್ ಸಭೆಗಳಲ್ಲಿ ಈ ಕುರಿತು ಜನಪ್ರತಿನಿಧಿಗಳು ಧ್ವನಿ ಎತ್ತಿ ಕ್ರಮಕ್ಕೆ ಒತ್ತಾಯಿಸಿದ್ದರು.